ಪಟನಾ: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಶನಿವಾರ ಆರ್‌ಜೆಡಿ ಪಕ್ಷದ ಸಂಪುಟ ಸಚಿವರಿಗೆ ನೀತಿ ಸಂಹಿತೆ ಜಾರಿ ಮಾಡಿದ್ದಾರೆ. ಈ ಮೂಲಕ, ಆರ್‌ಜೆಡಿಯ ಹಲವು ಸಚಿವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ನಡುವೆಯೇ ಪಕ್ಷದ ವರ್ಚಸ್ಸು ಹೆಚ್ಚಿಸಲು ಯತ್ನಿಸಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪಕ್ಷದ ಸಚಿವರು ಅನುಸರಿಸಬೇಕಾದ ನೀತಿಸಂಹಿತೆಗಳನ್ನು ತೇಜಸ್ವಿ ಯಾದವ್ ತಿಳಿಸಿದ್ದಾರೆ. ಸಚಿವರು ಹೊಸ ಕಾರುಗಳನ್ನು ಖರೀದಿಸಬಾರದು, ಭೇಟಿ ನೀಡಲು ಬರುವ ಕಾರ್ಯಕರ್ತರಿಗೆ ಕಾಲು ಮುಟ್ಟಿ ನಮಸ್ಕರಿಸಲು ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.
ಭೇಟಿ ವೇಳೆ ನಮಸ್ತೆ ಹೇಳಬೇಕು, ಧರ್ಮ, ಜಾತಿಯನ್ನು ಎಣಿಸದೆ ಬಡವರಿಗೆ ನೆರವಾಗಬೇಕು,ಹೂಗುಚ್ಛದ ಬದಲಿಗೆ ಪುಸ್ತಕ ಪೆನ್ನುಗಳನ್ನು ನೀಡಲು ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.