ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಹೈದರಾಬಾದ್‌ನಲ್ಲಿ 125 ಅಡಿ ಎತ್ತರದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಿದರು.
ಅಂಬೆಡ್ಕರ್ ಜಯಂತಿ ಅಂಗವಾಗಿ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ಇದು ಭಾರತದ ಅತಿ ಎತ್ತರದ ಪ್ರತಿಮೆಯಾಗಿದ್ದು, ಹೈದರಾಬಾದ್‌ನ ಹುಸೇನ್ ಸಾಗರ್ ಸರೋವರದ ದಡದಲ್ಲಿ ನಿರ್ಮಿಸಲಾಗಿದೆ.
ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
‘ತೆಲಂಗಾಣ ರಾಜ್ಯ ಸಚಿವಾಲಯದ ಪಕ್ಕ ಸ್ಥಾಪಿಸಲಾಗುವ ಭಾರತದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಪ್ರತಿದಿನ ಜನರಿಗೆ ಹಾಗೂ ಆಡಳಿತ ವರ್ಗಕ್ಕೆ ಸ್ಪೂರ್ತಿ ನೀಡುತ್ತದೆ’ ಎಂದು ಎಂದು ಚಂದ್ರಶೇಖರ್ ಅವರು ಹೇಳಿದ್ದಾರೆ.
ಅಂಬೇಡ್ಕರ್ ಪ್ರತಿಮೆಯ ತಾಂತ್ರಿಕ ಮತ್ತು ಉತ್ಪಾದನಾ ಕ್ರಮದ ನಿರ್ಧಾರಕ್ಕೆ ಕನಿಷ್ಠ ಎರಡು ವರ್ಷ ಸಮಯ ಹಿಡಿದಿದೆ.
‘98 ವರ್ಷದ ಶಿಲ್ಪಿ ರಾಮ್ ವಾಂಜಿ ಸುತಾರ್ ಈ ಪ್ರಯತ್ನ ಮಾಡಿದ್ದಾರೆ’ ಎಂದು ಚಂದ್ರಶೇಖರ್ ಅವರು ಪ್ರಶಂಸಿದ್ದಾರೆ.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಸುತಾರ್ ಅವರನ್ನು ತೆಂಗಾಣ ಸರ್ಕಾರ ಇದೇ ವೇಳೆ ಗೌರವಿಸಿದೆ.
ಅಂಬೇಡ್ಕರ್ ಪ್ರತಿಮೆ ಅನಾವರಣ, ಹೊಸ ಸಚಿವಾಲಯ ಕಟ್ಟಡದ ಉದ್ಘಾಟನೆ ಹಾಗೂ ಇತರ ವಿಷಯಗಳ ಕುರಿತು ಚರ್ಚಿಸಲು ಚಂದ್ರಶೇಖರ್ ರಾವ್ ಅವರು ಇತ್ತೀಚೆಗಷ್ಟೇ ಸಚಿವರ ಹಾಗೂ ಅಧಿಕಾರಿಗಳ ಸಭೆ ಕರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.