ADVERTISEMENT

ತೆಲಂಗಾಣ CM ರೇವಂತ್ ರೆಡ್ಡಿ – ಪ್ರಧಾನಿ ಭೇಟಿ: ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ

ಪಿಟಿಐ
Published 4 ಜುಲೈ 2024, 12:36 IST
Last Updated 4 ಜುಲೈ 2024, 12:36 IST
<div class="paragraphs"><p>ರೇವಂತ್ ರೆಡ್ಡಿ, ನರೇಂದ್ರ ಮೋದಿ,&nbsp; ಭಟ್ಟಿ ವಿಕ್ರಮಾರ್ಕ</p></div>

ರೇವಂತ್ ರೆಡ್ಡಿ, ನರೇಂದ್ರ ಮೋದಿ,  ಭಟ್ಟಿ ವಿಕ್ರಮಾರ್ಕ

   

ಫೇಸ್‌ಬುಕ್ ಚಿತ್ರ: ಪ್ರಧಾನಮಂತ್ರಿ ಕಾರ್ಯಾಲಯ

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿಯವರು ಗುರುವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ADVERTISEMENT

ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಅವರೂ ಇದೇ ವೇಳೆ ಇದ್ದರು.

ಮೂರನೇ ಬಾರಿ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ಬಳಿಕ ಇವರಿಬ್ಬರ ಮೊದಲ ಭೇಟಿ ಇದಾಗಿದೆ.

ಭೇಟಿ ವೇಳೆ ಹಲವು ಪ್ರಮುಖ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ರೇವಂತ್ ರೆಡ್ಡಿ ಮಾತುಕತೆ ನಡೆಸಿದರು ಎಂದು ಗೊತ್ತಾಗಿದೆ.

ಇದಕ್ಕೂ ಮೊದಲು ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ತೆಲಂಗಾಣದ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

ಭೇಟಿಯ ವೇಳೆ ನಡೆದ ಮಾತುಕತೆಯ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲದಿದ್ದರೂ, ತೆಲಂಗಾಣದ ಅಭಿವೃದ್ಧಿ ಯೋಜನೆಗಳಿಗೆ ಸಹಾಯ ಪಡೆಯುವುದು ಭೇಟಿಯ ಉದ್ದೇಶವಾಗಿತ್ತು ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.