ADVERTISEMENT

ತೆಲಂಗಾಣ: ಸರ್ಕಾರಿ ನೌಕರರ ವೇತನ, ನಿವೃತ್ತಿ ವಯಸ್ಸು ಹೆಚ್ಚಳ

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 10:55 IST
Last Updated 22 ಮಾರ್ಚ್ 2021, 10:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ಕೊರೊನಾ ಸಾಂಕ್ರಾಮಿಕದ ಬಿಕ್ಕಟ್ಟಿನ ನಡುವೆಯೇ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ತೆಲಂಗಾಣ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 58ರಿಂದ 61 ವರ್ಷಕ್ಕೆ ಹೆಚ್ಚಿಸುವ ಜತೆಗೆ, ವೇತನವನ್ನು ಶೇ 30ರಷ್ಟು ಪರಿಷ್ಕರಿಸುವುದಾಗಿ ಘೋಷಿಸಿದ್ದಾರೆ.

ವೇತನ ಪರಿಷ್ಕರಣೆ ಏಪ್ರಿಲ್ 1, 2021ರಿಂದ ಅನ್ವಯವಾಗಲಿದ್ದು, ನಿವೃತ್ತಿ ವಯಸ್ಸಿನ ಹೆಚ್ಚಳ ತಕ್ಷಣದಿಂದಲೇ ಜಾರಿಗೆ ಬರಲಿದೆ. 'ಅನುಭವಿ ನೌಕರರ ಸೇವೆಯನ್ನು ಬಳಸಿಕೊಳ್ಳುವುದು ಈ ಕ್ರಮಗಳ ಉದ್ದೇಶವಾಗಿದೆ' ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ನಿವೃತ್ತಿ ವಯಸ್ಸಿನ ಹೆಚ್ಚಳ, ಟಿಆರ್‌ಎಸ್‌ ಪಕ್ಷದ ‌ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಾಗಿತ್ತು.

ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ನಿವೃತ್ತಿ ವಯಸ್ಸು ಹೆಚ್ಚಳ ಮತ್ತು ವೇತನ ಪರಿಷ್ಕರಣೆಯನ್ನು ಘೋಷಿಸಿದ ಚಂದ್ರಶೇಖರಾವ್, ‘ಕೋವಿಡ್ -19‘ ನಿಂದ ಉಂಟಾದ ಹಣಕಾಸಿನ ಕೊರತೆಯಿಂದಾಗಿ 11ನೇ ವೇತನ ಪರಿಷ್ಕರಣೆ ವಿಳಂಬವಾಗಿದೆ‘ ಎಂದು ಹೇಳಿದರು.

ADVERTISEMENT

‘ರಾಜ್ಯವು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದರೂ, ನೌಕರರಿಗೆ 12 ತಿಂಗಳ ಬಾಕಿ ವೇತನವನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ. ಈ ಬಾಕಿ ವೇತವನವನ್ನು ನಿವೃತ್ತಿ ಸೌಲಭ್ಯಗಳ ಜೊತೆಗೆ ಪಾವತಿಸಲಾಗುವುದು ಎಂದು ರಾವ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.