ADVERTISEMENT

ಪಶುವೈದ್ಯೆ ಹತ್ಯೆ ಪ್ರರಕಣ: ತ್ವರಿತಗತಿ ನ್ಯಾಯಾಲಯ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 14:32 IST
Last Updated 4 ಡಿಸೆಂಬರ್ 2019, 14:32 IST
   

ಹೈದರಾಬಾದ್‌: ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣದ ವಿಚಾರಣೆಗಾಗಿ ಮಹಬೂಬ್‌ನಗರದಲ್ಲಿ ತ್ವರಿತಗತಿ ನ್ಯಾಯಾಲಯ ಸ್ಥಾಪಿಸಿ ತೆಲಂಗಾಣ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಮಹಬೂಬ್‌ನಗರದಲ್ಲಿರುವ ಪ್ರಧಮ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ಗೆ ತ್ವರಿತಗತಿ ನ್ಯಾಯಾಲಯ ಸ್ಥಾನಮಾನ ನೀಡಲಾಗಿದ್ದು, ಪ್ರಕರಣದ ನಾಲ್ವರು ಆರೋಪಿಗಳ ವಿಚಾರಣೆ ಇಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪಶುವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ತಲ್ಲಣ ಸೃಷ್ಟಿಸಿತ್ತು.ಹತ್ಯೆಯಾಗಿರುವ 7ಪಶುವೈದ್ಯೆ ಶಂಶಾದ್‌ಬಾದ್‌ನ ಟೋಲ್‌ ಪ್ಲಾಜಾ ಬಳಿ ಬುಧವಾರ (ನವೆಂಬರ್‌ 27) ಸಂಜೆ 6:15 ರ ಸುಮಾರಿಗೆ ತನ್ನ ದ್ವಿಚಕ್ರ ವಾಹನ ಪಾರ್ಕ್‌ ಮಾಡಿ ಚರ್ಮರೋಗ ತಜ್ಞರನ್ನು ಭೇಟಿಯಾಗಲು ಟ್ಯಾಕ್ಸಿಯಲ್ಲಿ ತೆರಳಿದ್ದರು. ವಾಹನ ಪಾರ್ಕ್‌ ಮಾಡಿದ್ದನ್ನು ಗಮನಿಸಿದ್ದ ಆರೋಪಿಗಳು ಅದರ ಗಾಲಿಯನ್ನು ಪಂಕ್ಚರ್‌ ಮಾಡಿದ್ದರು.

ಚರ್ಮ ವೈದ್ಯರನ್ನು ಭೇಟಿಯಾಗಿ ರಾತ್ರಿ 9:15 ರ ಸುಮಾರಿಗೆ ಟೋಲ್‌ ಪ್ಲಾಜಾದ ಬಳಿ ಬಂದಿದ್ದ ಪಶುವೈದ್ಯೆ ತನ್ನ ವಾಹನ ಪಂಕ್ಚರ್‌ ಆಗಿದ್ದನ್ನು ಗಮನಿಸಿದ್ದರು. ಆಗ ಪಶುವೈದ್ಯೆಗೆ ಸಹಾಯ ಮಾಡುವ ನೆಪದಲ್ಲಿ ಬಂದಿದ್ದ ಆರೋಪಿಗಳು ಅವರನ್ನು ಸಮೀಪದ ಪೊದೆಯತ್ತ ಒತ್ತಾಯ‍ಪೂರ್ವಕವಾಗಿ ಎಳೆದೊಯ್ದರು. ನಂತರ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದರು. ಬಳಿಕ ಉಸಿರುಗಟ್ಟಿಸಿ ಕೊಂದುಶವವನ್ನು ತಮ್ಮದೇ ಟ್ರಕ್‌ನಲ್ಲಿ ಟೋಲ್‌ ಪ್ಲಾಜಾದಿಂದ ಸುಮಾರು 27 ಕಿ.ಮೀ. ದೂರ ಕೊಂಡೊಯ್ದು, ರಾತ್ರಿ 2:30 ಸುಮಾರಿಗೆ ಸೇತುವೆಯೊಂದರ ಕೆಳಗೆ ಶವ ಇಳಿಸಿ, ಅದರ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದರು.

ಈ ಘಟನೆ ಬಳಿಕ ದೇಶದಾದ್ಯಂತ ವ್ಯಾ‍ಪಕ ಆಕ್ರೋಶ ವ್ಯಕ್ತವಾಗಿದೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.