ADVERTISEMENT

ತೆಲಂಗಾಣ: ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ₹25 ಲಕ್ಷ ನೀಡಿ ಸನ್ಮಾನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 16:22 IST
Last Updated 4 ಫೆಬ್ರುವರಿ 2024, 16:22 IST
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು   

ಹೈದರಾಬಾದ್: ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ ಚಿರಂಜೀವಿ ಸೇರಿದಂತೆ ತೆಲಂಗಾಣದ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಭಾನುವಾರ ಸನ್ಮಾನಿಸಲಾಯಿತು.

ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಪ್ರಶಸ್ತಿ ಪುರಸ್ಕೃತರಿಗೆ ತಲಾ ₹25 ಲಕ್ಷ ನೀಡಿ ಗೌರವಿಸಿದರು.

ಜತೆಗೆ ಪದ್ಮ ಪ್ರಶಸ್ತಿ ಪಡೆದ ಲೇಖಕರು ಹಾಗೂ ಕಲಾವಿದರಿಗೆ ₹25,000 ಮಾಸಾಶಾನ ನೀಡುವುದಾಗಿ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ. 

ADVERTISEMENT

ಪದ್ಮವಿಭೂಷಣ ಪುರಸ್ಕೃತರಾದ ವೆಂಕಯ್ಯ ನಾಯ್ಡು, ಚಿರಂಜೀವಿ ಅವರ ಜತೆ ಪದ್ಮಶ್ರೀ ಪುರಸ್ಕೃತರಾದ ಗಡ್ಡಂ ಸಮ್ಮಯ್ಯ, ವೇಲು ಆನಂದಾಚಾರಿ, ಕೇತವಾತ ಸೋಮಲಾಲ್, ದಾಸರಿ ಕೊಂಡಪ್ಪ, ಉಮಾ ಮಹೇಶ್ವರಿ ಮತ್ತು ಕುರೆಳ್ಳ ವಿಠ್ಠಲಾಚಾರ್ಯ ಅವರನ್ನೂ ಸನ್ಮಾನಿಸಲಾಯಿತು.

‘ಇದು ರಾಜಕೀಯಕ್ಕೆ ಹೊರತಾದ ಕಾರ್ಯಕ್ರಮವಾಗಿದೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಸಲು ಎಲ್ಲರೂ ಮುಂದಾಗಬೇಕಿದೆ. ತೆಲುಗಿನ ಹೆಮ್ಮೆಯಾದ ವೆಂಕಯ್ಯ ನಾಯ್ಡು ಮುಂದೆ ರಾಷ್ಟ್ರಪತಿ ಸ್ಥಾನ ಅಲಂಕರಿಸಲಿ’ ಎಂದು ರೇವಂತ್ ರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.