ADVERTISEMENT

ತೆಲಂಗಾಣದಲ್ಲಿ ಮಯೋನಿಸ್ ಮಾರಾಟ ನಿಷೇಧ

ಪಿಟಿಐ
Published 31 ಅಕ್ಟೋಬರ್ 2024, 2:36 IST
Last Updated 31 ಅಕ್ಟೋಬರ್ 2024, 2:36 IST
<div class="paragraphs"><p>ಮಯೋನಿಸ್ (ಪ್ರಾತಿನಿಧಿಕ ಚಿತ್ರ)</p></div>

ಮಯೋನಿಸ್ (ಪ್ರಾತಿನಿಧಿಕ ಚಿತ್ರ)

   

ಚಿತ್ರ: iStock Photo

ಹೈದರಾಬಾದ್‌: ಮೊಟ್ಟೆಯಿಂದ ತಯಾರಿಸುವ ಮಯೋನಿಸ್ (Mayonnaise) ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟವನ್ನು ಒಂದು ವರ್ಷದವರೆಗೆ ನಿಷೇಧಿಸಿ ತೆಲಂಗಾಣ ಸರ್ಕಾರ ಆದೇಶಿಸಿದೆ.

ADVERTISEMENT

ಮಯೋನಿಸ್ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸಾರ್ವಜನಿಕರಿಂದ ಬಂದ ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಿದ್ದು, ಈ ವೇಳೆ ಮೊಟ್ಟೆಯಿಂದ ಮಾಡುವ ಮಯೋನಿಸ್‌ನಲ್ಲಿ ವಿಷಾಹಾರಕ್ಕೆ(ಫುಡ್ ಪಾಯಿಸನಿಂಗ್) ಕಾರಣವಾಗುವ ಅಂಶಗಳು ಕಂಡುಬಂದಿದೆ. ಆದ್ದರಿಂದ ತಕ್ಷಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ರಾಜ್ಯ ಆಹಾರ ಸುರಕ್ಷತಾ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೊಟ್ಟೆಯ ಹಳದಿ ಭಾಗವನ್ನು ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಮಯೋನಿಸ್ ಅನ್ನು ತಯಾರಿಸಲಾಗುತ್ತದೆ. ಸುವಾಸನೆಗೆ ವಿನೇಗರ್ ಅಥವಾ ನಿಂಬೆ ಹಣ್ಣನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಸ್ಯಾಂಡ್‌ವಿಚ್‌, ಸಲಾಡ್‌, ಶವರ್ಮ ಸೇರಿದಂತೆ ವಿವಿಧ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.