ADVERTISEMENT

Caste census: ತೆಲಂಗಾಣದಲ್ಲಿ ಜಾತಿಗಣತಿ ಆರಂಭ

ನವೆಂಬರ್‌ ಅಂತ್ಯದಲ್ಲಿ ಗಣತಿ ಪೂರ್ಣ l ಚುನಾವಣಾ ಪೂರ್ವ ಭರವಸೆ ಕಾರ್ಯಗತ

ಪಿಟಿಐ
Published 6 ನವೆಂಬರ್ 2024, 13:41 IST
Last Updated 6 ನವೆಂಬರ್ 2024, 13:41 IST
..
..   

ಹೈದರಾಬಾದ್‌: ‌ತೆಲಂಗಾಣದಲ್ಲಿ ಬುಧವಾರ ಜಾತಿಗಣತಿಗೆ ಚಾಲನೆ ನೀಡಲಾಗಿದೆ.

ಸಾಮಾಜಿಕ, ಆರ್ಥಿಕ, ರಾಜಕೀಯ, ಉದ್ಯೋಗ ಮತ್ತು ಜಾತಿ ಕುರಿತಾದ ಸಮಗ್ರ ಗಣತಿಯು ಇದಾಗಿದೆ.

ಜಾತಿಗಣತಿ ನಡೆಸುವ ಸಿಬ್ಬಂದಿಗೆ ಸರ್ಕಾರ ತರಬೇತಿಯನ್ನು ನೀಡಿದ್ದು, ಈ ತಿಂಗಳ ಅಂತ್ಯದಲ್ಲಿ ಗಣತಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ADVERTISEMENT

ಗ್ರೇಟರ್‌ ಹೈದರಾಬಾದ್‌ ಪಾಲಿಕೆ ಕಚೇರಿಯಲ್ಲಿ ಗಣತಿಗೆ ಚಾಲನೆ ನೀಡಿದ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್‌ ಅವರು, ‘ಮಾಹಿತಿಗಳನ್ನು ಗೋಪ್ಯವಾಗಿ ಇರಿಸಲಾಗುವುದು. ಅಸಮಾನತೆಯನ್ನು ಹೋಗಲಾಡಿಸಿ, ಎಲ್ಲರಿಗೂ ಸಮಾನ ನ್ಯಾಯ ಸಿಗುವಂತೆ ಮಾಡುವುದು ಈ ಗಣತಿಯ ಉದ್ದೇಶ’ ಎಂದು ತಿಳಿಸಿದ್ದಾರೆ.

‘ಸಮಾಜದ ವಿವಿಧ ವರ್ಗಗಳ ಕಲ್ಯಾಣ ಮತ್ತು ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಲು ಜಾತಿಗಣತಿ ಸಹಕಾರಿಯಾಗುತ್ತದೆ' ಎಂದು ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಡಿ.ಶ್ರೀಧರ್‌ ಬಾಬು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.