ADVERTISEMENT

ಕೋಳಿಗೂ–ಕೊರೊನಾಕ್ಕೂ ಸಂಬಂಧವಿಲ್ಲ: ಸಾರ್ವಜನಿಕವಾಗಿ ಮಾಂಸ ತಿಂದ ತೆಲಂಗಾಣ ಸಚಿವರು

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 10:10 IST
Last Updated 29 ಫೆಬ್ರುವರಿ 2020, 10:10 IST
ಕೋಳಿ ಮಾಂಸ ಸೇವಿಸಿದ ತೆಲಂಗಾಣ ಸಚಿವರು
ಕೋಳಿ ಮಾಂಸ ಸೇವಿಸಿದ ತೆಲಂಗಾಣ ಸಚಿವರು   

ಹೈದರಾಬಾದ್‌: ಕೊರೊನಾ ವೈರಸ್‌ ಭೀತಿಯಿಂದ ಕೋಳಿ ಮಾಂಸ ಸೇವನೆಯಲ್ಲಿ ತೀವ್ರ ಇಳಿಮುಖವಾದ ಬೆನ್ನಲ್ಲೇ ತೆಲಂಗಾಣ ಸಚಿವರು ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲಿ ಕೋಳಿ ಮಾಂಸ ಸೇವಿಸಿದ್ದಾರೆ. ಆ ಮೂಲಕ ಕೋಳಿ ಮಾಂಸಕ್ಕೂ ಕೊರೊನಾ ವೈರಸ್‌ಸೋಂಕಿಗೂ ಯಾವುದೇ ಸಂಬಂಧ ಇಲ್ಲವೆಂಬ ಸಂದೇಶ ರವಾನಿಸಿದ್ದಾರೆ.

ಹೈದರಾಬಾದ್‌ ನಗರದ ಟ್ಯಾಂಕ್‌ ಬುಂದ್‌ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲಂಗಾಣ ಸಚಿವರಾದ ಕೆ.ಟಿ.ರಾಮ ರಾವ್‌, ಎಟೆಲಾ ರಾಜೇಂದ್ರ ಮತ್ತು ತಲಸಾನಿ ಶ್ರೀನಿವಾಸ್‌ ಯಾದವ್‌ ಅವರು ಕೋಳಿ ಮಾಂಸ ಮತ್ತು ಮೊಟ್ಟೆ ಸೇವಿಸಿದ್ದಾರೆ.

ಕೋಳಿ ಮಾಂಸದಿಂದ ಕೊರೊನಾ ಸೋಂಕು ತಗುಲುತ್ತದೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಡಿದಾಡಿದ ಕಾರಣ ಕೋಳಿ ಮಾಂಸ ಸೇವನೆಯಲ್ಲಿ ತೀವ್ರ ಇಳಿಮುಖವಾಗಿದೆ.

ADVERTISEMENT

ಈ ಬೆಳವಣಿಗೆ ಕೋಟ್ಯಾಂತರ ರುಪಾಯಿ ನಷ್ಟಕ್ಕೆ ಕಾರಣವಾಗಿದ್ದು, ಕೋಳಿ ಮಾಂಸೋದ್ಯಮಿಗಳನ್ನು ಚಿಂತಗೀಡು ಮಾಡಿದ ಬಗ್ಗೆ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.