ADVERTISEMENT

Telangana Election: ₹600 ಕೋಟಿ ಒಡೆಯ ವಿವೇಕಾನಂದ ಶ್ರೀಮಂತ ಅಭ್ಯರ್ಥಿ

ಪಿಟಿಐ
Published 13 ನವೆಂಬರ್ 2023, 14:03 IST
Last Updated 13 ನವೆಂಬರ್ 2023, 14:03 IST
<div class="paragraphs"><p>ಜಿ. ವಿವೇಕಾನಂದ</p></div>

ಜಿ. ವಿವೇಕಾನಂದ

   

ಹೈದರಾಬಾದ್‌: ಚೆನ್ನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ವಿವೇಕಾನಂದ ಅವರು ತೆಲಂಗಾಣ ವಿಧಾನಸಭಾ ಚುನಾವಣೆಯ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಅತ್ಯಂತ ಶ್ರೀಮಂತ. ಇವರು ತಮ್ಮ ಬಳಿ ₹602 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ವಿವೇಕಾನಂದ ಮತ್ತು ಅವರ ಪತ್ನಿ ₹377 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜೊತೆಗೆ ₹225 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ₹41.5 ಕೋಟಿ ಸಾಲ ಹೊಂದಿದ್ದಾರೆ ಎಂದು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ನಮೂದಿಸಲಾಗಿದೆ. 

ADVERTISEMENT

2019ರ ಆರ್ಥಿಕ ವರ್ಷದಲ್ಲಿ ₹4.66 ಕೋಟಿ ಇದ್ದ ಅವರ ವಾರ್ಷಿಕ ಆದಾಯವು ಕಳೆದ ಆರ್ಥಿಕ ವರ್ಷದಲ್ಲಿ ₹6.26 ಕೋಟಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಅವರ ಪತ್ನಿಯ ವಾರ್ಷಿಕ ಆದಾಯವು ₹6.09 ಕೋಟಿಯಿಂದ ₹9.61 ಕೋಟಿಗೆ ಏರಿಕೆಯಾಗಿದೆ.

₹460 ಕೋಟಿ ಆಸ್ತಿ ಘೋಷಿಸಿರುವ ಪಾಲೈರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪಿ. ಶ್ರೀನಿವಾಸ್‌ ರೆಡ್ಡಿ ಅವರು ಎರಡನೆಯ ಅತ್ಯಂತ ಶ್ರೀಮಂತ. ನವೆಂಬರ್‌ 9ರಂದು ಅವರು ನಾಮಪತ್ರ ಸಲ್ಲಿಸಿದರು. ಅವರಿಗೆ ಸೇರಿದ ಸ್ವತ್ತುಗಳ ಮೇಲೆ ಆದಾಯ ತೆರಿಗೆ ಇಲಾಖೆ ಆ ದಿನ ದಾಳಿ ನಡೆಸಿತ್ತು. ಇದು ರಾಜಕೀಯ ದುರುದ್ದೇಶದ ದಾಳಿ ಎಂದು ಶ್ರೀನಿವಾಸ್‌ ರೆಡ್ಡಿ ಆರೋಪಿಸಿದ್ದರು. 

ಕಣದಲ್ಲಿರುವ ಮೂರನೇ ಶ್ರೀಮಂತ ಅಭ್ಯರ್ಥಿ ಕಾಂಗ್ರೆಸ್‌ನ ರಾಜ್‌ಗೋಪಾಲ್‌ ರೆಡ್ಡಿ. ಇವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ ₹459 ಕೋಟಿ.

ನಾಲ್ಕನೇ ಶ್ರೀಮಂತ ಅಭ್ಯರ್ಥಿ ಬಿಆರ್‌ಎಸ್‌ನ ಪೈಳ್ಲ ಶೇಖರ್ ರೆಡ್ಡಿ ಅವರು ₹227 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ. ಬಿಆರ್‌ಎಸ್‌ ಮುಖ್ಯಸ್ಥ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ₹59 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಒಟ್ಟು 4,798 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.