ADVERTISEMENT

ಟೆಲಿಕಾಂ: 10 ಅಧಿಕಾರಿಗ ಕಡ್ಡಾಯ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 15:38 IST
Last Updated 24 ಡಿಸೆಂಬರ್ 2022, 15:38 IST
ಅಶ್ವಿನ್‌ ವೈಷ್ಣವ್‌
ಅಶ್ವಿನ್‌ ವೈಷ್ಣವ್‌   

ನವದೆಹಲಿ (ಪಿಟಿಐ): ದೂರಸಂಪರ್ಕ ಇಲಾಖೆಯ ಜಂಟಿ ಕಾರ್ಯದರ್ಶಿ ಸಹಿತ ಇಲಾಖೆಯ 10 ಮಂದಿ ಹಿರಿಯ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೆ ಸಚಿವ ಅಶ್ವಿನ್‌ ವೈಷ್ಣವ್‌ ಅನುಮತಿ ನೀಡಿದ್ದಾರೆ.ಶೂನ್ಯ ಭ್ರಷ್ಟಾಚಾರ ಸರ್ಕಾರ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ನಿರ್ದೇಶಕ ಹಂತದಲ್ಲಿ ಕೆಲಸ ಮಾಡುತ್ತಿದ್ದ 9 ಅಧಿಕಾರಿಗಳು ಹಾಗೂ ಜಂಟಿ ಕಾರ್ಯದರ್ಶಿ ಶ್ರೇಣಿಯಲ್ಲಿದ್ದ ಒಬ್ಬರು ಸೇರಿದೂರಸಂಪರ್ಕ ಇಲಾಖೆಯ 10 ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೆ ಅನುಮೋದನೆ ನೀಡಲಾಗಿದೆ. ಪ್ರತಿ ವರ್ಷ ಸರ್ಕಾರ ಆಚರಿಸುವ ‘ಉತ್ತಮ ಆಡಳಿತ ದಿನ’ ಮುನ್ನಾ ದಿನ ಈ ಕ್ರಮ ಕೈಗೊಳ್ಳಲಾಗಿದೆ.

ಸೆಪ್ಟೆಂಬರ್‌ನಲ್ಲಿ, ಸಾರ್ವಜನಿಕ ವಲಯದ ಉದ್ಯಮಕ್ಕೆ ₹ 1.64 ಲಕ್ಷ ಕೋಟಿ ಪ್ಯಾಕೇಜ್ ಅನ್ನು ಕ್ಯಾಬಿನೆಟ್ ಘೋಷಿಸುವ ಸಂದರ್ಭದಲ್ಲಿ ನಿದ್ದೆಗೆ ಜಾರಿದ್ದ ಹಿರಿಯ ಬಿಎಸ್‌ಎನ್‌ಎಲ್‌ ಅಧಿಕಾರಿಗೆ ಸೇವೆಯಿಂದ ಸ್ವಯಂ ನಿವೃತ್ತಿ ನೀಡಲಾಗಿತ್ತು. ರೈಲ್ವೆ ಖಾತೆಯನ್ನೂ ಹೊಂದಿರುವ ವೈಷ್ಣವ್ ಅವರು ರೈಲ್ವೆ ಇಲಾಖೆಯಲ್ಲಿನ ಸುಮಾರು 40 ಅಧಿಕಾರಿಗಳಿಗೆ ಅವರ ಕಾರ್ಯನಿರ್ವಹಣೆ ಮತ್ತು ಅಪ್ರಾಮಾಣಿಕತೆಗಾಗಿ ಬಲವಂತದ ನಿವೃತ್ತಿಯನ್ನು ನೀಡಿದ್ದಾರೆ. ಇವರಲ್ಲಿ ಕಾರ್ಯದರ್ಶಿ ಮಟ್ಟದ ಅಧಿಕಾರಿ ಮತ್ತು ಇಬ್ಬರು ವಿಶೇಷ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಸೇರಿದ್ದಾರೆ.

ADVERTISEMENT

ಸಿಸಿಎಸ್ (ಪಿಂಚಣಿ) ನಿಯಮಗಳು, 1972 ರ ಪಿಂಚಣಿ ನಿಯಮ 48 ರ ಅಡಿಯಲ್ಲಿ ಸೆಕ್ಷನ್ 56 (ಜೆ) ಅಡಿಯಲ್ಲಿ ಟೆಲಿಕಾಂ ಇಲಾಖೆಯಲ್ಲಿ ಉದ್ಯೋಗಿಗಳಿಗೆ ಬಲವಂತದ ನಿವೃತ್ತಿ ನೀಡಿರುವುದು ಇದೇ ಮೊದಲು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.