ADVERTISEMENT

ಮಹಾರಾಷ್ಟ್ರ: ದೇವಸ್ಥಾನಕ್ಕೆ ತುಂಡುಡುಗೆಯಲ್ಲಿ ಬರುವ ಭಕ್ತರ ಪ್ರವೇಶ ನಿಷೇಧ

ಪಿಟಿಐ
Published 18 ಮೇ 2023, 13:01 IST
Last Updated 18 ಮೇ 2023, 13:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಔರಂಗಬಾದ್‌: ಮಹಾರಾಷ್ಟ್ರದ ಉಸ್ಮಾನಾಬಾದ್‌ ಜಿಲ್ಲೆಯ ತುಳಜಾ ಭವಾನಿ ದೇವಾಲಯ ಆಡಳಿತವು ಹಾಫ್‌ ಪ್ಯಾಂಟ್‌ಗಳು ಅಥವಾ ಅಸಭ್ಯ ರೀತಿಯ ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಬರುವ ಜನರ ಪ್ರವೇಶವನ್ನು ನಿಷೇಧಿಸಿದೆ ಎಂದು ಆಡಳಿತಾಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಉಸ್ಮಾನಾಬಾದ್‌ನ ತುಳಜಾಪುರದಲ್ಲಿರುವ ಪ್ರಸಿದ್ಧ ತುಳಜಾ ಭವಾನಿ ದೇವಿಯ ದೇವಸ್ಥಾನಕ್ಕೆ ಪ್ರತಿ ವರ್ಷವು ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಭೇಟಿ ನೀಡುತ್ತಾರೆ. ಧಾರ್ಮಿಕ ಸ್ಥಳದ ಪಾವಿತ್ರ್ಯತೆಯನ್ನು ಕಾಪಾಡಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ದೇವಸ್ಥಾನದ ಆಡಳಿತ ಮಂಡಳಿಯು ಮರಾಠಿ ಭಾಷೆಯಲ್ಲಿ ಫಲಕಗಳನ್ನು ಹಾಕಿದ್ದು, ‘ಅಸಭ್ಯ ರೀತಿಯ ಬಟ್ಟೆಗಳು ಮತ್ತು ದೇಹದ ಅಂಗಗಳನ್ನು ಪ್ರದರ್ಶಿಸುವಂತಹ ಉಡುಪುಗಳು, ಹಾಫ್‌ ಪ್ಯಾಂಟ್‌ಗಳು ಮತ್ತು ಬರ್ಮುಡಾಗಳಂತಹ ಬಟ್ಟೆಗಳನ್ನು ಧರಿಸಿ ಬರುವವರಿಗೆ ದೇವಸ್ಥಾನದ ಪ್ರವೇಶಕ್ಕೆ ಅನುಮತಿಸಲಾಗುವುದಿಲ್ಲ.’ ‘ದಯವಿಟ್ಟು ಭಾರತೀಯ ಸಂಸ್ಕೃತಿಯನ್ನು ನೆನಪಿನಲ್ಲಿಡಿ’ ಎಂಬ ಸಂದೇಶದಲ್ಲಿ ತಿಳಿಸಿದೆ.

ADVERTISEMENT

‘ಈ ಫಲಕವನ್ನು ಇಂದು ಪ್ರದರ್ಶಿಸಲಾಗಿದೆ. ನಾವು ದೇವಸ್ಥಾನಕ್ಕೆ ಭಕ್ತಿಯಿಂದ ಹೋಗುತ್ತೇವೆ. ಆದ್ದರಿಂದ ಅದರ ಪಾವಿತ್ರ್ಯತೆಯನ್ನು ಕಾಪಾಡಲು ತುಳಜಾ ಭವಾನಿ ದೇವಸ್ಥಾನದ ಪ್ರವೇಶದಲ್ಲಿ ಈ ಫಲಕವನ್ನು ಅಳವಡಿಸಲಾಗಿದೆ. ಈ ತರಹದ ನಿಯಮಗಳು ದೇಶದಾದ್ಯಂತ ಹಲವು ದೇವಸ್ಥಾನಗಳಲ್ಲಿ ಈಗಾಗಲೇ ಜಾರಿಯಲ್ಲಿವೆ ಎಂದು ದೇವಸ್ಥಾನದ ಆಡಳಿತ ಸಾರ್ವಜನಿಕ ಸಂಪರ್ಕ ಅಧಿಕಾರಿ ನಾಗೇಶ ಶಿತೋಳೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.