ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಗೆ ಭೇಟಿ ನೀಡಿದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಅಯೋಧ್ಯೆಯಲ್ಲಿ ಆದಷ್ಟು ಬೇಗ ರಾಮಮಂದಿರ ನಿರ್ಮಾಣ ಮಾಡಬೇಕು ಒತ್ತಾಯಿಸಿದ್ದಾರೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ಅಯೋಧ್ಯೆ ತಲುಪಿದ ಠಾಕ್ರೆ, ಪತ್ರಿಕಾಗೋಷ್ಠಿ ನಡೆಸಿದ್ದಾರೆ,
ಠಾಕ್ರೆ ಹೇಳಿದ್ದೇನು?
ಅಯೋಧ್ಯೆ ಭೇಟಿ ಹಿಂದೆ ಯಾವುದೇ ಗುಪ್ತ ಅಜೆಂಡಾ ಇಲ್ಲ.ವಿಶ್ವದಾದ್ಯಂತವಿರುವ ಮತ್ತು ಎಲ್ಲ ಭಾರತೀಯರ ಭಾವನೆಗಳನ್ನು ವ್ಯಕ್ತ ಪಡಿಸುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ.ನಿನ್ನೆ ನಾನು ಸಾಧುಗಳನ್ನು ಭೇಟಿಯಾಗಿ ಆವರ ಆಶೀರ್ವಾದ ಪಡೆದಿದ್ದೆ.ನಿಮ್ಮ ಆಶೀರ್ವಾದ ಇಲ್ಲದೆ ನಾವು ಈಗ ಆರಂಭಿಸಿರುವ ಕಾರ್ಯ ಪೂರ್ಣಗೊಳ್ಳುವುದಿಲ್ಲ ಎಂದು ನಾನು ಅವರಲ್ಲಿ ಹೇಳಿದ್ದೆ. ಎಲ್ಲರೂ ರಾಮ ಮಂದಿರಕ್ಕಾಗಿ ಕಾಯುತ್ತಿದ್ದಾರೆ.
ಮಂದಿರ ಇತ್ತು, ಇದೆ ಮತ್ತು ಮುಂದೆಯೂ ಇರುವುದು ಎಂದು ಮುಖ್ಯಮಂತ್ರಿ ಯೋಗಿ ಅವರು ಹೇಳಿದ್ದರು. ಬೇಸರ ಏನೆಂದರೆ ಆ ಮಂದಿರ ಕಾಣುತ್ತಿಲ್ಲ, ಶೀಘ್ರದಲ್ಲೇ ಆ ಮಂದಿರದ ನಿರ್ಮಾಣ ಆಗಬೇಕಿದೆ ಎಂದಿದ್ದಾರೆ ಠಾಕ್ರೆ.
ರಾಮ ಮಂದಿರ ವಿಷಯ ಕಾನೂನುವ್ಯಾಪ್ತಿಯಲ್ಲಿರುವ ಕಾರಣ ರಾಜಕೀಯ ಪಕ್ಷ ಅದನ್ನು ಮತಕ್ಕಾಗಿ ಬಳಸಬಾರದು.ಹಿಂದೂಗಳ ಭಾವನೆ ಜತೆ ಆಟವಾಡಬೇಡಿ ಎಂದು ನಾನು ಹೇಳುತ್ತಿದ್ದೇನೆ.ರಾಮ ಮಂದಿರ ನಿರ್ಮಾಣ ಆಗದೇ ಇದ್ದರೆ ಮತ್ತೊಮ್ಮೆ ಅಧಿಕಾರಕ್ಕೇರಲು ಸಾಧ್ಯವಾಗುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು.ಮಂದಿರ ನಿರ್ಮಿಸಲೇ ಬೇಕು ಎಂದು ಠಾಕ್ರೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.