ADVERTISEMENT

ಜಮ್ಮು: ಏಪ್ರಿಲ್‌ನಿಂದ ದುಷ್ಕೃತ್ಯ ಹೆಚ್ಚಳ

ಪಿಟಿಐ
Published 11 ನವೆಂಬರ್ 2024, 15:32 IST
Last Updated 11 ನವೆಂಬರ್ 2024, 15:32 IST
   

ಜಮ್ಮು: ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಭಯೋತ್ಪಾದನಾ ಚಟುವಟಿಕೆಗಳು ಕಡಿಮೆಯಾಗಿದ್ದರೂ, ಏಪ್ರಿಲ್‌– ಮೇ ತಿಂಗಳಿನಿಂದ ರಿಯಾಸಿ, ದೋಡಾ, ಕಿಶ್ತವಾಡ, ಕಠುವಾ, ಉಧಂಪುರ ಮತ್ತು ಜಮ್ಮುವಿನಲ್ಲಿ ಸರಣಿ ದುಷ್ಕೃತ್ಯಗಳು ನಡೆದಿವೆ.

ಗಡಿ ಜಿಲ್ಲೆಗಳಾದ ರಜೌರಿ, ಪೂಂಛ್‌ನಿಂದ ಆರು ಜಿಲ್ಲೆಗಳಿಗೆ ಭಯೋತ್ಪಾದಕರ ದುಷ್ಕೃತ್ಯಗಳು ವಿಸ್ತರಿಸಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಜಮ್ಮುವಿನಲ್ಲಿ ಈ ವರ್ಷ ನಡೆದ ಭಯೋತ್ಪಾದಕ ಕೃತ್ಯಗಳಲ್ಲಿ 18 ಭದ್ರತಾ ಸಿಬ್ಬಂದಿಯೂ ಸೇರಿದಂತೆ 44 ಜನರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಶಾಂತಿಯುತ ಪ್ರದೇಶದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಪಾಕಿಸ್ತಾನ ನಡೆಸುತ್ತಿರುವ ಯತ್ನವನ್ನು ವಿಫಲಗೊಳಿಸಲು ಸೇನೆಯು ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳೊಂದಿಗೆ ನಿಕಟ ಸಹಭಾಗಿತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದೆ.

ಒಳನುಸುಳುವಿಕೆಯನ್ನು ಪತ್ತೆ ಹಚ್ಚಲಿಕ್ಕಾಗಿ, ಗಡಿಯ ಹಳ್ಳಿಗಳಲ್ಲಿ ರಾತ್ರಿ ಗಸ್ತನ್ನು ಹೆಚ್ಚಿಸಲಾಗಿದೆ. ಜನರಿಗೆ ಹತ್ತಿರವಾಗಲು ‘ಆಪರೇಷನ್‌ ಸದ್ಭಾವನಾ’ದಡಿ ಹಲವು ಕಾರ್ಯಕ್ರಮ ರೂಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.