ಮೇಂಧರ್/ ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪತ್ತೆಯಾದ ಉಗ್ರರ ಶಂಕಿತ ಅಡಗುದಾಣವನ್ನು ಭದ್ರತಾ ಪಡೆಗಳು ಶನಿವಾರ ಧ್ವಂಸ ಮಾಡಿದವು. ಸ್ಥಳದಿಂದ ಗ್ರೆನೇಡ್‌ಗಳು ಮತ್ತು ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮೇಂಧರ್ ಉಪ ವಿಭಾಗದ ಬಲನೋಯ್ ಸೆಕ್ಟರ್‌ನಲ್ಲಿ ಶೋಧ ನಡೆಸುತ್ತಿದ್ದ ಸಂದರ್ಭದಲ್ಲಿ ಅಡಗುದಾಣ ಪತ್ತೆಯಾಗಿತ್ತು ಎಂದು ಹೇಳಿದರು.
ಈ ಮಧ್ಯೆ, ಭದ್ರತಾ ಸಿಬ್ಬಂದಿ ಮನ್‌ಕೋಟೆ ಸೆಕ್ಟರ್ ಸಮೀಪ ಗಸ್ತು ತಿರುಗುವ ವೇಳೆ ತುಕ್ಕು ಹಿಡಿದ ಮೋರ್ಟರ್ ಶೆಲ್ ಪತ್ತೆಯಾಗಿದೆ. ನಂತರ ಅದನ್ನು ಸುರಕ್ಷಿತ ಸ್ಥಳದಲ್ಲಿ ಸ್ಫೋಟಗೊಳಿಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.