ಲಖನೌ: ಪ್ರವಾದಿ ಮಹಮದ್ದರ ಅವಹೇಳನ ಆರೋಪದಲ್ಲಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರ ಹತ್ಯೆಗಾಗಿ ಜೈಶ್ ಎ ಮೊಹಮ್ಮದ್‌ಸಂಘಟನೆಯಿಂದ ನಿಯೋಜನೆಯಾಗಿದ್ದ ಉಗ್ರಗಾಮಿಯೊಬ್ಬನನ್ನು ಉತ್ತರ ಪ್ರದೇಶದ ಭಯೋತ್ಪಾದನ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.
ಇದನ್ನೂ ಓದಿ:ಪಾಕ್ ಯುವಕ ಬಂಧನ: ನೂಪುರ್ ಹತ್ಯೆ ಸಂಚು ಬಹಿರಂಗ
ಬಂಧಿತ ಉಗ್ರನನ್ನು ಮುಹಮ್ಮದ್ ನದೀಮ್ ಎಂದು ಗುರುತಿಸಲಾಗಿದೆ.
ಈತ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳಾದ ಜೆಇಎಂ ಮತ್ತು ತೆಹ್ರೀಕ್– ಇ– ತಾಲಿಬಾನ್ ಪಾಕಿಸ್ತಾನ (ಟಿಟಿಪಿ)ಯೊಂದಿಗೆ ನೇರ ಸಂಪರ್ಕದಲ್ಲಿದ್ದ ಎಂದು ಎಟಿಎಸ್ ತಿಳಿಸಿದೆ.
ನೂಪುರ್ ಶರ್ಮಾ ಅವರನ್ನು ಹತ್ಯೆ ಮಾಡುವ ಕೆಲಸವನ್ನು ನದೀಮ್‌ಗೆ ವಹಿಸಲಾಗಿತ್ತು ಎಂದು ಎಟಿಎಸ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.