ರಾಜೌರಿ/ ಜಮ್ಮು: ಜಮ್ಮು–ಕಾಶ್ಮೀರದ ರಜೌರಿ ಜಿಲ್ಲೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಗುಹೆ ರೀತಿಯಂತೆ ಇದ್ದ ಉಗ್ರರ ಅಡಗುದಾಣವನ್ನು ಪತ್ತೆ ಹಚ್ಚಿರುವ ಭದ್ರತಾ ಪಡೆಗಳು, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸಿಡಿಮದ್ದುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಶಂಕಿತ ಚಟುವಟಿಕೆಗಳ ಕುರಿತ ಮಾಹಿತಿ ಮೇರೆಗೆ ಪೊಲೀಸರು, ರಾಷ್ಟ್ರೀಯ ರೈಫಲ್ಸ್, ಬಿಎಸ್ಎಫ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಬುಧವಾರ ತಡರಾತ್ರಿಯಿಂದಲೇ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಕಾಲಕೋಟೆಯ ಧರಮಸಾಲ್ ಪ್ರದೇಶದ ಗುಲಾಬ್‌ಗಢದಲ್ಲಿದ್ದ ಉಗ್ರರ ಅಡಗುತಾಣಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಕೆ ಅಸಾಲ್ಟ್ ರೈಫಲ್, ಎರಡು ಮ್ಯಾಗಜೀನ್‌ಗಳು, ಎರಡು ಮ್ಯಾಗಜೀನ್ ಸಹಿತವಾಗಿದ್ದ ಪಿಸ್ತೂಲ್, ಎರಡು ಹ್ಯಾಂಡ್ ಗ್ರೆನೇಡ್‌ಗಳು, ಸ್ಫೋಟಕವಿದ್ದ ಮೂರು ಪಾಕೆಟ್‌ಗಳು ಮತ್ತು ಸುಮಾರು ನೂರು ಸುತ್ತು ದಾಳಿ ಮಾಡಬಹುದಾದ ಸಿಡಿಮದ್ದುಗಳು, ಆಹಾರ ಪದಾರ್ಥಗಳು, ಎರಡು ಪ್ಯಾಕೆಟ್ ಸಿಗರೇಟ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.