ಮುಂಬೈ : ಠಾಣೆ ಜಿಲ್ಲೆಯ ಬದ್ಲಾಪುರದ ಶಾಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ಬಂಧಿಸಲಾಗಿದೆ.
ಈ ಇಬ್ಬರನ್ನು ಈವರೆಗೆ ಬಂಧಿಸದೇ ಇರುವುದಕ್ಕೆ ಬಾಂಬೆ ಹೈಕೋರ್ಟ್, ಆಕ್ರೋಶ್ ವ್ಯಕ್ತಪಡಿಸಿತ್ತು. ಇಬ್ಬರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಮರುದಿನವೇ ಇವರನ್ನು ಬಂಧಿಸಲಾಗಿದೆ.
ನ.18ರೊಳಗೆ ತನಿಖಾ ವರದಿ ನೀಡಿ: ಈ ಪ್ರಕರಣದ ಆರೋಪಿ ಅಕ್ಷಯ್ ಶಿಂದೆ, ಪೊಲೀಸ್ ಶೂಟೌಟ್ನಲ್ಲಿ ಹತ್ಯೆಯಾದ ಪ್ರಕರಣದ ತನಿಖಾ ವರದಿಯನ್ನು ನ.18ರ ಒಳಗಾಗಿ ಸಲ್ಲಿಸಬೇಕೆಂದು ಬಾಂಬೆ ಹೈಕೋರ್ಟ್ ಗುರುವಾರ ಮ್ಯಾಜಿಸ್ಟ್ರೇಟ್ಗೆ ನಿರ್ದೇಶನ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.