ADVERTISEMENT

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೊರೊ-ಬೋಟ್ ಸಿದ್ಧಪಡಿಸಿದ ಥಾಣೆ ಮೂಲದ ಎಂಜಿನಿಯರ್

ಮೃತ್ಯುಂಜಯ ಬೋಸ್
Published 7 ಜೂನ್ 2020, 10:48 IST
Last Updated 7 ಜೂನ್ 2020, 10:48 IST
ಕೊರೊ-ಬೋಟ್ ಎಂಬ ಹೆಸರಿನ ರೋಬೋಟ್
ಕೊರೊ-ಬೋಟ್ ಎಂಬ ಹೆಸರಿನ ರೋಬೋಟ್   

ಥಾಣೆ: ಕೋವಿಡ್-19 ಪಿಡುಗು ವಿರುದ್ಧ ಹೋರಾಡುವುದಕ್ಕಾಗಿ ಥಾಣೆ ಮೂಲದಇನ್‌ಸ್ಟ್ರುಮೆಂಟಲ್ ಎಂಜಿನಿಯರ್ ರೋಬೋಟ್‌‌ನ್ನುಅಭಿವೃದ್ಧಿ ಪಡಿಸಿದ್ದಾರೆ.ಇದಕ್ಕೆ ಕೊರೊ- ಬೋಟ್(Coro-bot) ಎಂದು ಹೆಸರಿಟ್ಟಿದ್ದು, ಇದು ಆಸ್ಪತ್ರೆಗಳಲ್ಲಿವಾರ್ಡ್ ಬಾಯ್ ಮತ್ತು ನರ್ಸ್‌ಗಳ ಕೆಲಸವನ್ನು ಮಾಡಲಿದೆ.

ಥಾಣೆ ನಿವಾಸಿಯಾಗಿರುವ ಪ್ರತೀಕ್ ತಿರೋಡ್ಕರ್ ಈ ರೋಬೋಟ್ ಅಭಿವೃದ್ಧಿ ಪಡಿಸಿರುವ ಎಂಜಿನಿಯರ್.ಈ ರೋಬೋಟ್ ಕೊರೊನಾ ವೈರಸ್ ರೋಗಿಗಳ ವಾರ್ಡ್‌ಗೆ ಹೋಗಿ ಅವರಿಗೆ ಆಹಾರ, ನೀರು ಮತ್ತು ಔಷಧಿಯನ್ನು ನೀಡಲಿದೆ. ಹಾಗಾಗಿ ನರ್ಸ್ ಅಥವಾ ವಾರ್ಡ್ ಬಾಯ್‌ಗಳು ರೋಗಿಗಳ ಸಂಪರ್ಕಕ್ಕೆ ಬರುವುದಿಲ್ಲ.ಪ್ರಧಾನಿ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಗುರಿಯಿಂದ ಸ್ಫೂರ್ತಿ ಪಡೆದು ಪ್ರತೀಕ್ ಈ ರೋಬೋಟ್ ಅಭಿವೃದ್ಧಿ ಪಡಿಸಿದ್ದಾರೆ.

ಕ್ಯಾಮೆರಾಬಳಸಿ ಈ ರೋಬೋಟ್ ರೋಗಿಗಳೊಂದಿಗೆ ಸಂವಹನ ನಡೆಸುತ್ತದೆ. ರೋಬೋಟ್ ತಂದುಕೊಡುವ ಟ್ರೇಗಳಿಂದ ಯಾವುದೇ ವಸ್ತುವನ್ನು ತೆಗೆದುಕೊಳ್ಳುವ ಮುನ್ನ ಕೈ ಸ್ಯಾನಿಟೈಜ್ ಮಾಡುವಂತೆ ರೋಗಿಗಳಿಗೆ ಆಡಿಯೊ ಮೂಲಕ ಸೂಚನೆ ನೀಡಲಾಗುತ್ತದೆ. ರೋಬೋಟ್ ಮೂರು ಟ್ರೇಗಳನ್ನು ಹೊತ್ತೊಯ್ಯುತ್ತದೆ. ಇವುಗಳಲ್ಲಿ 10-15 ಕೆಜಿ ತೂಕದ ವಸ್ತುಗಳನ್ನು ಕೊಂಡೊಯ್ಯುವ ಸಾಮರ್ಥ್ಯವಿದ್ದು , 30 ಕೆಜಿ ತೂಕದ ವಸ್ತು ಸಂಗ್ರಹಿಸುವ ಸಾಮರ್ಥ್ಯವಿದೆ.

ADVERTISEMENT

ಟ್ರೇ ಮುಟ್ಟುವ ಮುನ್ನ ರೋಗಿಗಳು ಕೈ ಮುಂದೆ ಚಾಚಿದರೆ ಅವರ ಕೈಗೆ ಸ್ಯಾನಿಜೈಟರ್ ಹಾಕಲಿದೆ ರೋಬೋಟ್. ಅವರು ಅಲ್ಲಿಂದ ಕೈ ಹಿಂದಕ್ಕೆ ತೆಗೆದು ಕೊಂಡ ಕೂಡಲೇ ಸೆನ್ಸರ್ ಅದನ್ನು ಗ್ರಹಿಸುತ್ತದೆ. ಎಲ್ಇಡಿ ಲೈಟ್ ಹೊಂದಿರುವ ಕಾರಣ ಈ ರೋಬೋಟ್ಗಳನ್ನು ರಾತ್ರಿ ಹೊತ್ತಿನಲ್ಲಿಯೂ ಬಳಸಬಹುದು. ಮಾತ್ರವಲ್ಲದೆ ಇದರಲ್ಲಿ ಚಿಕ್ಕ ಕಂಪ್ಯೂಟರ್ ವ್ಯವಸ್ಥೆ ಇದ್ದು ಮನರಂಜನೆಗೂ ಬಳಕೆಯಾಗುತ್ತದೆ.

ರೋಗಿಗಳನ್ನು ಸ್ಯಾನಿಟೈಜ್ ಮಾಡುವುದು ಮಾತ್ರವಲ್ಲದೆ ರೋಬೋಟ್ ಸ್ವಯಂ ಸ್ಯಾನಿಟೈಜ್ ಆಗುವ ಮೂಲಕ ರೋಗ ಹರಡುವುದನ್ನು ತಡೆಯುತ್ತದೆ. ಇದರ ಹಿಂಭಾಗದಲ್ಲಿ ಮೂರು ತೂತುಗಳಿದ್ದು ಸ್ವಯಂ ಸ್ಯಾನಿಟೈಜ್ ಮಾಡುವುದಕ್ಕೆ ಇದನ್ನು ಬಳಸಲಾಗುತ್ತದ. ಅಷ್ಟೇ ಅಲ್ಲದೆ ಅದು ನಡೆದಾಡಿದ ಜಾಗನ್ನು ಅಲ್ಟ್ರಾ ವೈಲೆಟ್ ರಶ್ಮಿಗಳನ್ನು ಬಳಸಿ ಸ್ಯಾನಿಟೈಜ್ ಮಾಡುತ್ತದೆ.

ಕೊರೊನಾರೋಗಿಗಳ ಶುಶ್ರೂಷೆ ಮಾಡುತ್ತಿರುವ ನಮ್ಮ ವಾರ್ಡ್ ಬಾಯ್ಸ್, ನರ್ಸ್‌ಗಳಿಗಾಗಿ ನಾನು ಈ ರೋಬೋಟ್ ತಯಾರಿಸಿದ್ದು. ಲಾಕ್‌ಡೌನ್ ಆದ ಕಾರಣ ಅದಕ್ಕೆ ಬೇಕಾಗಿರುವ ವಸ್ತುಗಳನ್ನು ಸಂಗ್ರಹಿಸಲುಕಷ್ಟವಾಯಿತು ಅಂತಾರೆ ತಿರೋಡ್ಕರ್, ಕಲ್ಯಾಣ್ ಸಂಸದ ಶ್ರೀಕಾಂತ್ ಶಿಂಧೆ ಅವರು ನನಗೆ ಸಹಾಯ ಮಾಡಿದರು ಎಂದು ತಿರೋಡ್ಕರ್ ಹೇಳಿದ್ದಾರೆ.

ಲಾಕ್‍ಡೌನ್‌ನಿಂದಾಗಿ ಎಲ್ಲ ವಸ್ತುಗಳು ಸಿಗದೇ ಇದ್ದಾಗ ನಾನು ನನ್ನ ಮೂವರು ಉದ್ಯೋಗಿಗಳ ಜತೆ ಸೇರಿ ಕೆಲವು ಬಿಡಿಭಾಗಗಳನ್ನು ತಯಾರಿಸಿದ್ದೇವೆ. ಲಾಕ್‌ಡೌನ್ ತೆರವುಗೊಂಡು ಬೇಕಾದ ವಸ್ತುಗಳು ನಮಗೆ ಸಿಕ್ಕಿದರೆ ರೋಬೋಟ್‌ನ ರೂಪವನ್ನು ನಾವು ಮತ್ತಷ್ಟು ಸುಧಾರಿಸಲಿದ್ದೇವೆ. ನಮ್ಮ ಘಟಕವು ವಾರಕ್ಕೆ 2-3 ರೋಬೋಟ್‌ಗಳನ್ನು ಅಭಿವೃದ್ಧಿ ಪಡಿಸುವ ಸಾಮರ್ಥ್ಯ ಹೊಂದಿದೆ.ಆದಾಗ್ಯೂ, ಇದರ ಮೂಲ ಮಾದರಿ ನಿರ್ಮಿಸಲು ಬೇಕಾಗಿದ್ದು 15-20 ದಿನಗಳಷ್ಟೇ, ಸದ್ಯ ಇದನ್ನು ಕಲ್ಯಾಣ್‌ನಲ್ಲಿರುವ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಬಳಸಲಾಗುತ್ತದೆ.

ಪ್ರತೀಕ್ ಮತ್ತು ಆತನ ತಂಡವು ರೋಬೋಟ್‌ನ್ನು ನಿರ್ವಹಿಸಲು ವಿಶೇಷ ಆ್ಯಪ್‌ವೊಂದನ್ನು ಅಭಿವೃದ್ಧಿ ಪಡಿಸಿದ್ದು, ದೂರದಲ್ಲಿ ನಿಂತು ಕೂಡಾ ರೋಬೋಟ್‌ನ್ನು ನಿಯಂತ್ರಿಸಬಹುದಾಗಿದೆ. ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮೆಕ್ಯಾನಿಸಂನ್ನು ಇದಕ್ಕೆ ಬಳಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.