ADVERTISEMENT

ಕುಸಿಯುತ್ತಿರುವ ಆರ್ಥಿಕತೆ ಇಂದಿನ ಸಾಮಾಜಿಕ ಸ್ಥಿತಿಯ ಪ್ರತಿಬಿಂಬ: ಮನಮೋಹನ್ ಸಿಂಗ್

ಏಜೆನ್ಸೀಸ್
Published 30 ನವೆಂಬರ್ 2019, 4:28 IST
Last Updated 30 ನವೆಂಬರ್ 2019, 4:28 IST
   

ನವದೆಹಲಿ: ಕುಸಿಯುತ್ತಿರುವ ದೇಶದ ಆರ್ಥಿಕತೆ ‘ಇಂದಿನ ಸಾಮಾಜಿಕ ಸ್ಥಿತಿಯ ಪ್ರತಿಬಿಂಬ’ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ವ್ಯಾಖ್ಯಾನಿಸಿದ್ದಾರೆ. ಸಾಮಾಜಿಕ ಸಾಮರಸ್ಯ ಮತ್ತು ದೇಶದ ಪ್ರಗತಿ ಎರಡು ಪ್ರತ್ಯೇಕ ಅಂಶಗಳಲ್ಲ ಎಂಬುದನ್ನು ಕೇಂದ್ರ ಸರ್ಕಾರ ಅರಿತುಕೊಂಡರೆ ಮಾತ್ರ ನಿರಂತರ ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.

‘ನಮ್ಮ ಆರ್ಥಿಕತೆ ಚಿಂತಾಜನಕವಾಗಿದೆ. ಅದಕ್ಕಿಂತ ಹೆಚ್ಚಿನಕಳವಳಕಾರಿಯಾಗಿರುವುದು ನಮ್ಮ ಸಾಮಾಜಿಕ ಸ್ಥಿತಿ. ಆರ್ಥಿಕ ಸ್ಥಿತಿಯು ಸಮಾಜದ ಪ್ರತಿಬಿಂಬವಾಗಿದೆ. ಇಂದು ನಮ್ಮ ಸಾಮಾಜಿಕ ನಂಬಿಕೆ ಮತ್ತು ವಿಶ್ವಾಸ ಛಿದ್ರವಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳು ಒಂದಕ್ಕೊಂದು ಪೂರಕವಾಗಿರುತ್ತವೆ,’ ಎಂದು ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.4.5ಕ್ಕೆ ಕುಸಿದಿದ್ದರ ಹಿನ್ನೆಲೆಯಲ್ಲಿ ಶುಕ್ರವಾರ ಮಾತನಾಡಿರುವ ಮಾಜಿ ಪ್ರಧಾನಿ, ‘ಕೇಂದ್ರ ಸರ್ಕಾರವು ದೇಶವನ್ನು ಪ್ರಗತಿಯ ದಾರಿಗೆ ಮರಳಿ ತರಬೇಕೆಂದರೆ ಸಮಾಜದ ವಾತಾವರಣವನ್ನು ಬದಲಾಯಿಸಲು ಪ್ರಯತ್ನಿಸಬೇಕು. ಕೇವಲ ನೀತಿಗಳನ್ನು ಬದಲಾಯಿಸುವುದರಿಂದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವುದು ಸಾಧ್ಯವಿಲ್ಲ,’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.