ADVERTISEMENT

13 ರಾಜ್ಯಗಳ 26 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವೇಳಾಪಟ್ಟಿ ಪ್ರಕಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2024, 11:35 IST
Last Updated 16 ಮಾರ್ಚ್ 2024, 11:35 IST
   

ನವದೆಹಲಿ: ಲೋಕಸಭಾ ಚುನಾವಣೆ ಜೊತೆಯಲ್ಲಿಯೇ 13 ರಾಜ್ಯಗಳ 26 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಶನಿವಾರ ಹೇಳಿದರು.

ದೆಹಲಿಯ ವಿಜ್ಞಾನ ಭವನದಲ್ಲಿ ಮಾತನಾಡಿದ ಅವರು, ‘ಕರ್ನಾಟಕ, ಬಿಹಾರ, ಹರಿಯಾಣ, ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ತೆಲಂಗಾಣ, ತ್ರಿಪುರಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ರಾಜಸ್ಥಾನ, ತಮಿಳುನಾಡುನಲ್ಲಿ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಸುರಪುರ ಕ್ಷೇತ್ರಕ್ಕೆ ಮೇ 7ರಂದು, ಬಿಹಾರದ ಅಗೀಆಂವ್‌ ಕ್ಷೇತ್ರಕ್ಕೆ ಜೂನ್‌ 1ಕ್ಕೆ, ಗುಜರಾತ್‌ನ ಐದು ಕ್ಷೇತ್ರಕ್ಕೆ ಮೇ 3, ಹರಿಯಾಣದ ಕರ್ನಾಲ್ ಕ್ಷೇತ್ರಕ್ಕೆ ಮೇ 25ಕ್ಕೆ, ಜಾರ್ಖಂಡ್‌ನ ಗಂಧೆಯ್ ಕ್ಷೇತ್ರಕ್ಕೆ ಮೇ 20, ಮಹಾರಾಷ್ಟ್ರದ ಅಕೋಲಾ ವೆಸ್ಟ್‌ ಕ್ಷೇತ್ರಕ್ಕೆ ಏಪ್ರಿಲ್ 26, ತ್ರಿಪುರಾದ ರಾಮನಗರ ಕ್ಷೇತ್ರಕ್ಕೆ ಏಪ್ರಿಲ್ 19, ಉತ್ತರ ಪ್ರದೇಶದ ನಾಲ್ಕು ಕ್ಷೇತ್ರಗಳಿಗೆ ಮೇ 13, ಮೇ 20, ಮೇ 25, ಜೂನ್‌ 1, ಪಶ್ಚಿಮ ಬಂಗಾಳದ ಎರಡು ಕ್ಷೇತ್ರಕ್ಕೆ ಮೇ 7 ಮತ್ತು ಜೂನ್‌ 1ಕ್ಕೆ, ತೆಲಂಗಾಣದ ಸಿಕಿಂದರ್‌ಬಾದ್‌ಗೆ ಮೇ 13, ಹಿಮಾಚಲ ಪ್ರದೇಶದ 6 ಕ್ಷೇತ್ರಗಳಿಗೆ ಜೂನ್‌ 1, ರಾಜಸ್ಥಾನದ ಬಾಗಿದೋರಾ ಕ್ಷೇತ್ರಕ್ಕೆ ಏಪ್ರಿಲ್‌ 26, ತಮಿಳುನಾಡಿನ ವಿಲಾವನ್ಕೋಡ್‌ಗೆ ಏಪ್ರಿಲ್ 1ರಂದು ಉಪಚುನಾವಣೆ ನಡೆಯಲಿದೆ.

ADVERTISEMENT

26 ಕ್ಷೇತ್ರಗಳ ಮತ ಎಣಿಕೆ ಜೂನ್ 4ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.