ನವದೆಹಲಿ: ‘ಜೂನ್ 23 ರ ನಂತರ ದೇಶದಾದ್ಯಂತ ಮುಂಗಾರು ಪ್ರಬಲಗೊಳ್ಳಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಮಹಾ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ತಿಳಿಸಿದ್ದಾರೆ.
‘ಈ ಮದ್ಯ ಮಧ್ಯ, ಕೇಂದ್ರ, ಪಶ್ಚಿಮ, ವಾಯವ್ಯ ಹಾಗೂ ಈಶಾನ್ಯ ಭಾರತದಲ್ಲಿ ಮುಂಗಾರು ಸಾಮಾನ್ಯವಾಗಿರಲಿದೆ. ಆದರೆ,ದೇಶದ ಎಲ್ಲೆಡೆ ಮುಂಗಾರು ಮಾರುತಗಳು ಒಂದೇ ಸಮನಾಗಿ ಇರುವುದಿಲ್ಲ’ ಎಂದು ಮೋಹಪಾತ್ರ ತಿಳಿಸಿದ್ದಾರೆ.
ದೇಶದಾದ್ಯಂತ ಕೊನೆಗೊಂಡ ಕಳೆದ ಬೇಸಿಗೆಯಲ್ಲಿ ವಿಪರೀತ ಬಿಸಿಗಾಳಿ ಪ್ರಮಾಣ ಕಂಡು ಬಂದಿದ್ದರಿಂದ ಇದು ಕೃಷಿ ಚಟುವಟಿಕೆಗಳಿಗೆ ಮಾರಕವಾಗಿತ್ತು. ಒಂದು ವೇಳೆ ಮುಂಗಾರು ಮಳೆಯ ಕೊರತೆ ಕಾಡಿದ್ದರೇ ಅದು ಕೃಷಿಯನ್ನೇ ಪ್ರದಾನವಾಗಿಟ್ಟುಕೊಂಡಿರುವ ಭಾರತದ ಅರ್ಥ ವ್ಯವಸ್ಥೆ ಮೇಲೆ ಮಾರಕ ಪರಿಣಾಮ ಬೀರುತಿತ್ತು. ಇದರಿಂದ ದೇಶದ ಆಹಾರ ಭದ್ರತೆ ಹಾಗೂ ಆಹಾರ ಹಣದುಬ್ಬರದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತಿತ್ತು ಎಂದು ಮೋಹಪಾತ್ರ ಹೇಳಿದ್ದಾರೆ.
ಕಳೆದ ಬೇಸಿಗೆಯಲ್ಲಿ ಬಿಸಿ ಗಾಳಿ ಪ್ರಮಾಣ ವ್ಯಾಪಕವಾಗಿದ್ದರಿಂದ ಹಿಂಗಾರು ಗೋದಿ ಬೆಳೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಗೋದಿ ರಫ್ತನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ದೇಶದ ಒಟ್ಟು ವಾರ್ಷಿಕ ಮಳೆಯಲ್ಲಿ ಮಾನ್ಸೂನ್ ಮಳೆಯೇ ಶೇ 70 ರಷ್ಟು ಭಾಗವನ್ನು ಹೊಂದಿದೆ. ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನ ಅವಲಂಭಿತರಾಗಿರುವ ಮುಂಗಾರು ಮಳೆಯಿಂದ ದೇಶದ ಶೇ 60 ರಷ್ಟು ಕೃಷಿ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.