ADVERTISEMENT

ವಾಟ್ಸ್ಯಾಪ್‌ ಗ್ರೂಪ್‌ಗಳಿಂದ ಕಣ್ಮರೆ ಆಗುತ್ತಿವೆ ಕಾಶ್ಮೀರ ವಾಸಿಗಳ ಹೆಸರು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 16:12 IST
Last Updated 5 ಡಿಸೆಂಬರ್ 2019, 16:12 IST
   

ನವದೆಹಲಿ: ಕಳೆದ ನಾಲ್ಕು ತಿಂಗಳುಗಳಿಂದ ಕಾಶ್ಮೀರದಲ್ಲಿ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಿದ್ದರ ಪರಿಣಾಮ ವಾಟ್ಸ್ಯಾಪ್‌ ಗ್ರೂಪ್‌ಗಳಿಂದಕಾಶ್ಮೀರ ವಾಸಿಗಳಹೆಸರಗಳು ಕಣ್ಮರೆಯಾಗುತ್ತಿವೆ.

ಈ ಬಗ್ಗೆ ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಆತಂಕ ವ್ಯಕ್ತಪಡಿಸಿರುವ ಕೆಲ ವಾಟ್ಸ್ಯಾಪ್‌ ಬಳಕೆದಾರರು, ಕಾಶ್ಮೀರದಲ್ಲಿರುವ ತಮ್ಮ ಗೆಳೆಯರು ಮತ್ತು ಸಂಬಂಧಿಗಳ ಹೆಸರುಗಳುವಾಟ್ಸ್ಯಾಪ್‌ಗ್ರೂಪ್‌ಗಳಿಂದ ಕಣ್ಮರೆಯಾಗುತ್ತಿವೆ ಎಂದಿದ್ದಾರೆ.

ಈ ವಿಚಾರದ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕೆಲವರು ನಿರ್ದಿಷ್ಟವಾಗಿ ಕಾಶ್ಮೀರದಲ್ಲಿ ವಾಸಿಸುವವರ ಹೆಸರುಗಳೇ ಕ‌ಣ್ಮರೆ ಆಗುತ್ತಿರುವುದರಲ್ಲಿ ಏನೋ ಅಡಗಿದೆ ಎಂದು ಹೇಳಿದ್ದಾರೆ.

ADVERTISEMENT

ಈ ಬಗ್ಗೆ ‘ಎನ್‌ಡಿಟಿವಿ’ಗೆ ಪ್ರತಿಕ್ರಿಯಿಸಿರುವವಾಟ್ಸ್ಯಾಪ್‌ ವಕ್ತಾರ, 120 ದಿನಗಳ ಕಾಲ ವಾಟ್ಸ್ಯಾಪ್‌ನಲ್ಲಿ ನಿಷ್ಕ್ರಿಯವಾಗಿರುವ ಖಾತೆಗಳನ್ನು ತೆಗೆದುಹಾಕಬೇಕೆಂಬುದುಸಂಸ್ಥೆಯ ನಿಯಮವಾಗಿದೆಎಂದಿದ್ದಾರೆ.

‘ವಾಟ್ಸ್ಯಾಪ್‌ ಖಾತೆಯೊಂದು ಕಾರ್ಯ ಸ್ಥಗಿತಗೊಳಿಸಿದ30 ದಿನಗಳ ಒಳಗೆ ಚಾಟ್‌ ಲಾಗ್ಸ್‌, ಇಮೇಜ್‌ಸ್ ಮತ್ತು ವಿಡಿಯೋಗಳಂತಹ ದತ್ತಾಂಶಗಳ ಬ್ಯಾಕ್‌ ಅಪ್ ಪಡೆಯದೇಹೋದರೆ, ಅಂತಹದತ್ತಾಂಶಗಳು ಕಣ್ಮರೆಯಾಗಬಹುದು’ಎಂದು ವಾಟ್ಸಾಪ್‌ ವಕ್ತಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.