ಚೆನ್ನೈ:ಮೂತ್ರನಾಳದ ಸೋಂಕು ಮತ್ತು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರ ಆರೋಗ್ಯ ಸ್ಥಿತಿ ಮಂಗಳವಾರ ಮತ್ತಷ್ಟು ಗಂಭೀರವಾಗಿದೆ.
‘ಕಳೆದ ಐದು ತಾಸುಗಳಿಂದ ಎಂ.ಕರುಣಾನಿಧಿ ಅವರ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಕುಸಿದಿದೆ’ ಎಂದು ಕರುಣಾನಿಧಿ ಚಿಕಿತ್ಸೆ ಪಡೆಯುತ್ತಿರುವ ಚೆನ್ನೈನ ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕನಿರ್ದೇಶಕ ಡಾ.ಅರವಿಂದನ್ ಶೆಲ್ವರಾಜ್ ಪ್ರಕಟಣೆ ನೀಡಿದ್ದಾರೆ.
ಕರುಣಾನಿಧಿ ಅವರ ಆರೋಗ್ಯ ತೀವ್ರ ಕುಸಿದಿದೆ ಎಂಬ ಸುದ್ದಿ ಕೇಳಿಕಾವೇರಿ ಆಸ್ಪತ್ರೆಯ ಮುಂದೆ ಅವರ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ.
ಕರುಣಾನಿಧಿ ಅವರ ಆಂತರಿಕ ಅವಯವಗಳ ಕಾರ್ಯ ಚಟುವಟಿಕೆ ಸಹಜ ಸ್ಥಿತಿಯಲ್ಲಿ ಇಲ್ಲ. ಮುಂದಿನ 24 ಗಂಟೆಗಳ ನಂತರವೇ ಆರೋಗ್ಯ ಸ್ಥಿತಿ ಬಗ್ಗೆ ಹೇಳಲಾಗುವುದು ಎಂದು ಸೋಮವಾರ ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ತೀವ್ರ ನಿಗಾ ಘಟಕದಲ್ಲಿರುವ ಕರುಣಾನಿಧಿಯವರ ಆರೋಗ್ಯ ಕೆಲವು ದಿನಗಳ ಹಿಂದೆ ಚೇತರಿಸಿಕೊಂಡಿತ್ತು. ಆದರೆ, ಸೋಮವಾರ ಸಂಜೆ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಉಂಟಾಗಿದೆ ಎಂದು ಬಲ್ಲಮೂಲಗಳು ವರದಿ ಮಾಡಿದ್ದವು.
ಕಾವೇರಿ ಆಸ್ಪತ್ರೆಯ ಮುಂದೆ ಸೇರಿರುವ ಕರುಣಾನಿಧಿ ಅವರ ಅಭಿಮಾನಿಗಳು ಕಣ್ಣೀರಿಡುತ್ತಿರುವ ದೃಶ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.