ADVERTISEMENT

ದೇಶಕ್ಕಾಗಿ ಮಡಿಯುವ ಅಗತ್ಯವಿಲ್ಲ, ದೇಶಕ್ಕಾಗಿ ಜೀವಿಸಿ: ಅಮಿತ್ ಶಾ

ಪಿಟಿಐ
Published 7 ಜುಲೈ 2024, 13:46 IST
Last Updated 7 ಜುಲೈ 2024, 13:46 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

ಪಿಟಿಐ ಚಿತ್ರ

ಅಹಮದಾಬಾದ್: ದೇಶಕ್ಕಾಗಿ ಮಡಿಯುವ ಅಗತ್ಯವಿಲ್ಲ. ದೇಶಕ್ಕಾಗಿ ಜೀವಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ADVERTISEMENT

ಗುಜರಾತ್ ಅಭಿವೃದ್ಧಿಗೆ ಕಡ್ವ ಪಾಟಿದಾರ್ ಸಮುದಾಯದ ಕೊಡುಗೆಯನ್ನು ಶ್ಲಾಘಿಸುವ ಸಂದರ್ಭ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಮ್ಮುಖದಲ್ಲಿ ಪಾಟಿದಾರ್ ಸಮುದಾಯಕ್ಕೆ ನಿರ್ಮಾಣ ಮಾಡಲಾಗಿರುವ ಹಾಸ್ಟೆಲ್‌ವೊಂದನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನೀವು ಒಳ್ಳೆಯ ಐಎಎಸ್, ಐಪಿಎಸ್, ಸಿಎ, ವೈದ್ಯ, ಒಳ್ಳೆಯ ನಾಗರಿಕರಾಗಿರಬಹುದು. ಆದರೆ, ನೀವು ದೇಶಕ್ಕಾಗಿ ಕೆಲಸ ಮಾಡಬೇಕಿದೆ’ಎಂದಿದ್ದಾರೆ.

‘ಗುಜರಾತ್ ಅಭಿವೃದ್ಧಿ ಮತ್ತು ಪಾಟಿದಾರ್ ಸಮುದಾಯದ ಅಭಿವೃದ್ಧಿ ಎರಡೂ ಒಂದೇ. ತಮ್ಮ ಪರಿಶ್ರಮದ ಮೂಲಕ ಪಾಟಿದಾರ್ ಸಮುದಾಯ ತಮ್ಮ ಅಭಿವೃದ್ಧಿ ಜೊತೆಗೆ ರಾಜ್ಯ ಮತ್ತು ದೇಶದ ಬೆಳವಣಿಗೆಗೆ ಕೊಡುಗೆ ನೀಡಿದೆ’ಎಂದಿದ್ದಾರೆ.

‘ಉತ್ತರ ಗುಜರಾತ್‌ನಲ್ಲಿ ಓದಿದ ಪಾಟಿದಾರ್ ಸಮುದಾಯದ ಹಲವರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವುದು ಮುಖ್ಯ. ಶಿಕ್ಷಣವು ಅಭಿವೃದ್ಧಿಯ ಅಡಿಪಾಯ. ಶಿಕ್ಷಣ ಕ್ಷೇತ್ರವನ್ನು ಬಲಿಷ್ಠಗೊಳಿಸುವ ಮೂಲಕ ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಸರ್ಕಾರ ಶ್ರಮಿಸುತ್ತಿದೆ’ಎಂದಿದ್ದಾರೆ.

ಇದೇವೇಳೆ, ಅಹಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಎಸ್‌ಎಲ್‌ಐಎಂಎಸ್ ಆಸ್ಪತ್ರೆಯನ್ನು ಶಾ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.