ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆ ವಿಚಾರಬಿಜೆಪಿಮತ್ತು ಶಿವಸೇನೆ ನಡುವೆ ಭಿನ್ನಮತ ಸೃಷ್ಟಿಗೆ ಕಾರಣವಾಗಿದೆ. ಸರ್ಕಾರ ರಚನೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ, ಕೂಡಲೇ ಸರ್ಕಾರ ರಚನೆಯಾಗಲು ಮಹಾರಾಷ್ಟ್ರದಲ್ಲಿ ದುಷ್ಯಂತ್ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು,‘ತಂದೆ ಜೈಲಿನಲ್ಲಿರುವದುಷ್ಯಂತಮಹಾರಾಷ್ಟ್ರದಲ್ಲಿ ಇಲ್ಲ. ಇಲ್ಲಿ ಇರುವುದು ನಾವು.ಸತ್ಯ ಮತ್ತು ಧರ್ಮದ ಮೇಲೆ ನಂಬಿಕೆಇಟ್ಟು ನಾವು ರಾಜಕೀಯ ಮಾಡುತ್ತಾ ಬಂದಿದ್ದೇವೆ,’ ಎಂದು ಶಿವಸೇನೆಯ ವಕ್ತಾರ ಸಂಜಯ್ ರಾವತ್‌ಹೇಳಿದ್ದಾರೆ.
‘ಶರದ್ ಪವಾರ್ಅವರು ಮಹಾರಾಷ್ಟ್ರದಲ್ಲಿಬಿಜೆಪಿ ಮತ್ತು ಕಾಂಗ್ರೆಸ್ ವಿರೋಧಿ ವಾತಾವರಣ ಸೃಷ್ಟಿ ಮಾಡಿದವರು. ಅವರು ಬಿಜೆಪಿ ಜತೆಗೆ ಹೋಗುವ ಪ್ರಮೇಯವೇ ಇಲ್ಲ,’ ಎಂದೂ ಅವರು ತಿಳಿಸಿದರು.
‘ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಹಲವುಆಯ್ಕೆಗಳಿವೆ.ಅದರೆ, ಇತರರೊಂದಿಗೆ ಸೇರಿ ಸರ್ಕಾರರಚಿಸುವ ಪಾಪವನ್ನು ನಾವು ಮಾಡುವುದಿಲ್ಲ. ನಾವು ಯಾವಾಗಲು ಸತ್ಯದ ರಾಜಕೀಯ ಮಾಡುತ್ತಾ ಬಂದಿದ್ದೇವೆ. ನಾವು ಅಧಿಕಾರದಾಹಿಗಳಲ್ಲ,’ ಎಂದು ಶಿವಸೇನೆಯ ವರಿಷ್ಠಉದ್ಧವ್ಠಾಕ್ರೆ ಹೇಳಿರುವುದಾಗಿಸಂಜಯ್ ರಾವತ್ ಇದೇ ವೇಳೆ ಮಾಧ್ಯಮಗಳಿಗೆತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.