ADVERTISEMENT

ಅಮಾನತುಗೊಂಡ ಸಂಸತ್ ಸದಸ್ಯರಿಗೆ ವಿಧಿಸಿದ ಷರತ್ತುಗಳು ಏನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2023, 12:24 IST
Last Updated 20 ಡಿಸೆಂಬರ್ 2023, 12:24 IST
<div class="paragraphs"><p>ಸಂಸತ್ತು</p></div>

ಸಂಸತ್ತು

   

ನವದೆಹಲಿ: ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಈವರೆಗೆ 143 ಸಂಸದರನ್ನು ಸಂಸತ್ತಿನಿಂದ ಅಮಾನತು ಮಾಡಲಾಗಿದೆ. ರಾಜ್ಯಸಭೆಯಿಂದ 46 ಮತ್ತು ಲೋಕಸಭೆಯಿಂದ 97 ಸಂಸದರನ್ನು ಅಮಾನತು ಮಾಡಲಾಗಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 4ರಂದು ಆರಂಭವಾಗಿದೆ. ಲೋಕಸಭೆಯಲ್ಲಿ ಡಿಸೆಂಬರ್ 13ರಂದು ಎದುರಾದ ಭದ್ರತಾ ಲೋಪದ ವಿಚಾರವಾಗಿ ಚರ್ಚೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ಪ್ರತಿಭಟಿಸಿದ್ದ 14 ಸಂಸದರನ್ನು ಕಳೆದವಾರ (ಡಿ.14 ರಂದು) ಅಮಾನತು ಮಾಡಲಾಗಿತ್ತು. ಇದೇ ವಿಚಾರವಾಗಿ ಸೋಮವಾರ (ಡಿ.18) 78, ಮಂಗಳವಾರ 49 ಹಾಗೂ ಇಂದು (ಬುಧವಾರ) ಇಬ್ಬರನ್ನು ಅಮಾನತುಗೊಳಿಸಲಾಗಿದೆ.

ADVERTISEMENT

ಅಮಾನತುಗೊಂಡಿರುವ ಸಂಸದರಿಗೆ ಲೋಕಸಭೆ ಸಚಿವಾಲಯ ಕೆಲವು ಷರತ್ತುಗಳನ್ನು ವಿಧಿಸಿದೆ ಅವುಗಳೆಂದರೆ..

  • ಅಮಾನತಾದ ಸಂಸದರು ಸಂಸತ್ತಿನ ಪ್ರವೇಶ ಮಂಟಪ, ಗ್ಯಾಲರಿ ಮತ್ತು ಚೇಂಬರ್‌ಗಳಿಗೆ ಬರುವಂತಿಲ್ಲ

  • ಅವರು ಸದಸ್ಯರಾಗಿರುವ ಸಂಸದೀಯ ಸಮಿತಿಗಳ ಸಭೆಗಳಿಂದಲೂ ಅವರನ್ನು ಅಮಾನತುಗೊಳಿಸಲಾಗಿದೆ

  • ಅವರ ಹೆಸರಿನಲ್ಲಿ ಯಾವುದೇ ವಸ್ತುವನ್ನು ಇರಿಸುವಂತಿಲ್ಲ

  • ಅಮಾನತಿನ ಅವಧಿಯಲ್ಲಿ ಅವರು ಮಂಡಿಸಿದ ಯಾವುದೇ ಸೂಚನೆ ಸ್ವೀಕಾರಾರ್ಹವಲ್ಲ

  • ಅವರು ತಮ್ಮ ಅಮಾನತು ಅವಧಿಯಲ್ಲಿ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಮತ ಹಾಕುವಂತಿಲ್ಲ

  •  ಅಮಾನತು ಅವಧಿಯ ದೈನಂದಿನ ಭತ್ಯೆಗೆ ಅವರು ಅರ್ಹರಾಗಿರುವುದಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.