ADVERTISEMENT

ಮಹಿಳೆಯರಿಗೆ 1 ವರ್ಷ ಹೆರಿಗೆ ರಜೆ, ಪುರುಷರಿಗೆ 1 ತಿಂಗಳು ಪಿತೃತ್ವ ರಜೆ: ತಮಂಗ್‌

ಪಿಟಿಐ
Published 27 ಜುಲೈ 2023, 6:20 IST
Last Updated 27 ಜುಲೈ 2023, 6:20 IST
   

ಗ್ಯಾಂಗ್ಟಕ್‌: ಸಿಕ್ಕಿಂ ರಾಜ್ಯದಲ್ಲಿ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಹೆರಿಗೆ ರಜೆ ನೀಡಲಾಗುವುದು ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್‌ ತಮಂಗ್‌ ಹೇಳಿದ್ದಾರೆ.

ನಾಗರಿಕ ಸೇವಾ ಅಧಿಕಾರಿಗಳ ಸಂಘದ ವಾರ್ಷಿಕ ಸಾಮಾನ್ಯ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಘೋಷಣೆ ಮಾಡಿದರು. ಮಹಿಳೆಯರ ಜೊತೆಗೆ ಪುರುಷರಿಗೂ ಒಂದು ತಿಂಗಳು ಪಿತೃತ್ವ ರಜೆ ನೀಡಲಾಗುವುದು ಎಂದರು.

ಈ ಯೋಜನೆಯಿಂದ ಸರ್ಕಾರಿ ನೌಕರರು ತಮ್ಮ ಮಕ್ಕಳು ಹಾಗೂ ಕುಟುಂಬದ ಬಗ್ಗೆ ಕಾಳಜಿ ವಹಿಸಲು ಸಹಕಾರಿಯಾಗಲಿದೆ ಎಂದರು.

ADVERTISEMENT

ಈ ಯೋಜನೆಯಲ್ಲಿನ ಕೆಲವು ಸೇವಾ ನಿಯಮಗಳನ್ನು ಬದಲಾವಣೆ ಮಾಡಿ ಶೀಘ್ರದಲ್ಲೇ ವಿವರ ಪ್ರಕಟಿಸಲಾಗುವುದು ಎಂದು ಪ್ರೇಮ್ ಸಿಂಗ್‌ ತಮಂಗ್‌ ಹೇಳಿದರು. 

ರಾಜ್ಯದಲ್ಲಿ 1961ರ ಕಾಯ್ದೆ ಪ್ರಕಾರ ಮಹಿಳೆಯರಿಗೆ ಹೆರಿಗೆ ರಜೆ ನೀಡಲಾಗುತ್ತಿದೆ. ಸದ್ಯ ಮಹಿಳೆಯರು 6 ತಿಂಗಳು ಅಥವಾ 26 ವಾರಗಳ ವೇತನ ಸಹಿತ ಹೆರಿಗೆ ರಜೆ ಪಡೆಯುತ್ತಿದ್ದಾರೆ.

ಹಿಮಾಲಯದ ತಪ್ಪಲಿನಲ್ಲಿರುವ ಸಿಕ್ಕಿಂ ರಾಜ್ಯದಲ್ಲಿ ಸುಮಾರು 6.32 ಲಕ್ಷ ಜನರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.