ADVERTISEMENT

ದೇಶ ಆಳುತ್ತಿರುವವರು ಕಟುಕರು; ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ, ಮಾನವರನ್ನಲ್ಲ

​ಪ್ರಜಾವಾಣಿ ವಾರ್ತೆ
Published 20 ಜುಲೈ 2018, 13:12 IST
Last Updated 20 ಜುಲೈ 2018, 13:12 IST
   

ನವದೆಹಲಿ: ಸಂಸತ್ತಿನಲ್ಲಿ ನಡೆಯುತ್ತಿರುವ ಅವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಭಾಗವಹಿಸದಿರಲು ಬಿಜೆಪಿ ಮಿತ್ರ ಪಕ್ಷ ಶಿವಸೇನೆ ತೀರ್ಮಾನಿಸಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗುರುವಾರ ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಅವರಿಗೆ ಕರೆ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದ್ದರು.

ಆದರೆ ಅವಿಶ್ವಾಸ ಮತ ಪ್ರಕ್ರಿಯೆಯಿಂದ ಹೊರಗುಳಿದ ಶಿವಸೇನೆ ಶುಕ್ರವಾರ ತಮ್ಮ ಮುಖವಾಣಿ ಸಾಮ್ನಾದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದೆ.ದೇಶವನ್ನಾಳುವವರು ಕಟುಕರು; ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ, ಮನುಷ್ಯರನ್ನಲ್ಲ ಎಂಬ ಸಂಪಾದಕೀಯ ಬರೆದು ಶಿವಸೇನೆ ಬಿಜೆಪಿಗೆ ಟಾಂಗ್ ನೀಡಿದೆ.

ಅವಿಶ್ವಾಸ ಮತದಿಂದ ಹೊರಗುಳಿದಿರುವ ಬಗ್ಗೆ ಎನ್‍ಡಿಟಿವಿಜತೆ ಮಾತನಾಡಿದ ಶಿವಸೇನೆಯ ಮುಖಂಡ ಆನಂದ್ ರಾವ್ ಅದ್ಸುಲ್, ನಮ್ಮ ಪಕ್ಷ ಎಂದಿಗೂ ಪಕ್ಷದ ಮುಖ್ಯಸ್ಥರ ಮಾತನ್ನೇ ಪಾಲಿಸುತ್ತದೆ. ಕೇಂದ್ರ ಸರ್ಕಾರ ಭೂವಿವಾದ, ನೋಟು ರದ್ದತಿ ಮೊದಲಾದ ತಪ್ಪುಗಳನ್ನು ಮಾಡಿರುವುದರಿಂದ ಅವರೊಂದಿಗೆ ನಿಲ್ಲದೇ ಇರುವ ತೀರ್ಮಾನ ಕೈಗೊಂಡಿದ್ದೇವೆ ಎಂದಿದ್ದಾರೆ.

ADVERTISEMENT

ನಾವು ಸದಾ ಜನರಿಗಾಗಿ ಹೋರಾಡುತ್ತೇವೆ. ನಮಗೆ ಯಾರೂ ಬೆಂಬಲ ನೀಡಲಿಲ್ಲ. ತೆಲುಗು ದೇಶಂ ಪಕ್ಷದ ನಿರ್ಣಯಕ್ಕೂ ನಮಗೂ ಏನೂ ಸಂಬಂಧವಿಲ್ಲ ಎಂದಿದ್ದಾರೆ ಆನಂದ್ ರಾವ್ ಅದ್ಸುಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.