ADVERTISEMENT

ಭಾರತ ಶ್ರೀರಾಮ, ಭಗವಾನ್‌ ಕೃಷ್ಣನ ಭೂಮಿ: ಸಿಎಂ ಯೋಗಿ ಆದಿತ್ಯನಾಥ್‌

ಪಿಟಿಐ
Published 5 ಮೇ 2024, 3:25 IST
Last Updated 5 ಮೇ 2024, 3:25 IST
ಸಿಎಂ ಯೋಗಿ ಆದಿತ್ಯನಾಥ್‌
ಸಿಎಂ ಯೋಗಿ ಆದಿತ್ಯನಾಥ್‌   

ಫರೂಖಾಬಾದ್ (ಉತ್ತರ ಪ್ರದೇಶ): ‘ವೋಟ್‌ ಜಿಹಾದ್‌’ ಬಗ್ಗೆ ಮಾತನಾಡುವವರು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ. ಭಾರತವು ಶ್ರೀರಾಮ ಮತ್ತು ಭಗವಾನ್‌ ಕೃಷ್ಣನ ಭೂಮಿ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಫರೂಕಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಮಾಜವಾದಿ ಮತ್ತು ಕಾಂಗ್ರೆಸ್‌ನ ನಾಯಕರು ಧರ್ಮದ ಆಧಾರದ ಮೇಲೆ ಜನರಲ್ಲಿ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಭಾರತವನ್ನು ಇಸ್ಲಾಮೀಕರಣಗೊಳಿಸುವ ಪಿತೂರಿಯಾಗಿದೆ. ಅವರು ವೋಟ್‌ ಜಿಹಾದ್‌ ಬಗ್ಗೆ ಮಾತನಾಡುತ್ತಿದ್ದಾರೆ. ಮತದಾನದಲ್ಲಿ ಯಾವುದೇ ಜಿಹಾದ್‌ ಇಲ್ಲ. ನಮ್ಮ ಹಕ್ಕುಗಳನ್ನು ರಕ್ಷಿಸಲು ಹಾಗೂ ಪ್ರಬಲ ಪ್ರಜಾಪ್ರಭುತ್ವಕ್ಕಾಗಿ ಮತ ಹಾಕಬೇಕು’ ಎಂದು ತಿಳಿಸಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದ ಫರೂಖಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರ ಮತ ಯಾಚನೆ ಮಾಡುವ ವೇಳೆ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಸಮಾಜವಾದಿ ಪಕ್ಷದ ನಾಯಕಿ ಮರಿಯಾ ಆಲಂ, ‘ಪ್ರಸ್ತುತ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಅಲ್ಪಸಂಖ್ಯಾತ ಸಮುದಾಯಕ್ಕೆ ‘ವೋಟ್‌ ಜಿಹಾದ್‌’ನ ಅಗತ್ಯವಿದೆ ಎಂದು ಹೇಳಿದ್ದರು.

ADVERTISEMENT

‘ಬಡವರ ಹಕ್ಕನ್ನು ಕಸಿದುಕೊಂಡವರು ಈಗ ಜಿಹಾದ್‌ ಅನ್ನು ನೆನಪಿಸಿಕೊಳ್ಳುತ್ತಿದ್ದಾರೆ. 2014ಕ್ಕೂ ಮುನ್ನ ಭಾರತ ವಿಶ್ವಾಸ ಕಳೆದುಕೊಂಡಿತ್ತು ಮತ್ತು ಭಯೋತ್ಪಾದನೆಯಿಂದ ಬಳಲುತ್ತಿತ್ತು. ಬಡವರಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ತಲುಪುತ್ತಿರಲಿಲ್ಲ. ಆದರೆ, 2014ರ ನಂತರ ಹೊಸ ಭಾರತ ರೂಪುಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಭಯೋತ್ಪಾದನೆಯಿಂದ ಮುಕ್ತಗೊಂಡಿದೆ’ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.