ADVERTISEMENT

UPPSC Exam | ಪರೀಕ್ಷೆ ನಿರ್ವಹಣೆಯಲ್ಲಿ ಉ.ಪ್ರದೇಶ ಸಂಪೂರ್ಣ ವೈಫಲ್ಯ: ಅಖಿಲೇಶ್

ಪಿಟಿಐ
Published 14 ನವೆಂಬರ್ 2024, 13:34 IST
Last Updated 14 ನವೆಂಬರ್ 2024, 13:34 IST
<div class="paragraphs"><p>ಅಖಿಲೇಶ್‌ ಯಾದವ್‌</p></div>

ಅಖಿಲೇಶ್‌ ಯಾದವ್‌

   

ಪ್ರಯಾಗರಾಜ್‌ (ಉತ್ತರ ಪ್ರದೇಶ): ಉತ್ತರ ಪ್ರದೇಶ ಲೋಕಸೇವಾ ಆಯೋಗದ (ಯುಪಿಪಿಎಸ್‌ಸಿ) ವಿವಿಧ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗಳನ್ನು ಸಮರ್ಥವಾಗಿ ಆಯೋಜಿಸುವಲ್ಲಿ ಮತ್ತು ಆಕಾಂಕ್ಷಿಗಳ ಪ್ರತಿಭಟನೆಯನ್ನು ನಿಭಾಯಿಸುವಲ್ಲಿ ವಿಫಲವಾಗಿರುವ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ವಾಗ್ದಾಳಿ ನಡೆಸಿದ್ದಾರೆ.

ಫುಲ್ಪುರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪ್ರತಿಭಟನೆಯನ್ನು ಉಲ್ಲೇಖಿಸಿ ಮಾತನಾಡಿರುವ ಅಖಿಲೇಶ್‌, ‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಬಗ್ಗೆ ಮಾತನಾಡುವವರಿಗೆ ಒಂದೇ ದಿನದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಯುಪಿಪಿಎಸ್‌ಸಿ ನಿರ್ಧಾರದ ವಿರುದ್ಧ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ರಿವ್ಯೂ ಅಧಿಕಾರಿ’ ಮತ್ತು ‘ಸಹಾಯಕ ರಿವ್ಯೂ ಅಧಿಕಾರಿ’ (ಆರ್‌ಒ–ಎಆರ್‌ಒ) ಹಾಗೂ ನಾಗರಿಕ ಸೇವೆಯ (ಪಿಸಿಎಸ್‌) ಪೂರ್ವಭಾವಿ ಪರೀಕ್ಷೆಗಳನ್ನು ಬೇರೆ ಬೇರೆ ದಿನಗಳಂದು, ಎರಡು, ಮೂರು ಪಾಳಿಗಳಲ್ಲಿ ನಡೆಸುವ ಉತ್ತರ ಪ್ರದೇಶ ಲೋಕಸೇವಾ ಆಯೋಗದ (ಯುಪಿಪಿಎಸ್‌ಸಿ) ನಿರ್ಧಾರವನ್ನು ವಿರೋಧಿಸಿ ಪರೀಕ್ಷಾ ಆಕಾಂಕ್ಷಿಗಳು ಪ್ರಯಾಗರಾಜ್‌ನಲ್ಲಿರುವ ಆಯೋಗದ ಪ್ರಧಾನ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಆರ್‌ಒ–ಎಆರ್‌ಒ ಹುದ್ದೆಗಳ ನೇಮಕಾತಿಗೆ ಡಿಸೆಂಬರ್‌ 22 ಮತ್ತು 23ರಂದು ಮೂರು ಪಾಳಿಗಳಲ್ಲಿ ಹಾಗೂ ಪಿಸಿಎಸ್‌ ಪೂರ್ವಭಾವಿ ಪರೀಕ್ಷೆಯಲ್ಲಿ ಡಿಸೆಂಬರ್‌ 7 ಮತ್ತು 8ರಂದು ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಸುವುದಾಗಿ ಆಯೋಗ ನವೆಂಬರ್‌ 5ರಂದು ಪ್ರಕಟಿಸಿತ್ತು. ಇದಕ್ಕೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.