ADVERTISEMENT

ದೆಹಲಿ ಚಲೋ: ಗಡಿಯಲ್ಲಿ ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್,14 ಸಾವಿರ ರೈತರ ಮೊಕ್ಕಾಂ

ಪಿಟಿಐ
Published 21 ಫೆಬ್ರುವರಿ 2024, 2:19 IST
Last Updated 21 ಫೆಬ್ರುವರಿ 2024, 2:19 IST
<div class="paragraphs"><p>ಪ್ರತಿಭಟನೆಯಲ್ಲಿ ತೊಡಗಿರುವ ರೈತರ&nbsp;ಟ್ರ್ಯಾಕ್ಟರ್‌ಗಳು ಸಾಲುಗಟ್ಟಿ ನಿಂತಿರುವುದು</p></div>

ಪ್ರತಿಭಟನೆಯಲ್ಲಿ ತೊಡಗಿರುವ ರೈತರ ಟ್ರ್ಯಾಕ್ಟರ್‌ಗಳು ಸಾಲುಗಟ್ಟಿ ನಿಂತಿರುವುದು

   

ಪಿಟಿಐ ಚಿತ್ರ

ನವದೆಹಲಿ: ಪಂಜಾಬ್-ಹರಿಯಾಣ ಗಡಿಯಲ್ಲಿ 1,200 ಟ್ರ್ಯಾಕ್ಟರ್, 300 ಕಾರುಗಳು, 10 ಮಿನಿ ಬಸ್‌ಗಳು ಮತ್ತು ಸಣ್ಣ ವಾಹನಗಳೊಂದಿಗೆ ಸುಮಾರು 14,000 ಜನ ರೈತರು ಮೊಕ್ಕಾಂ ಹೂಡಿದ್ದಾರೆ ಎಂದು ಕೇಂದ್ರವು ಅಂದಾಜಿಸಿದೆ. 

ADVERTISEMENT

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಕ್ಷೀಣಿಸುತ್ತಿದ್ದು, ಕಾಳಜಿಯ ವಿಷಯವಾಗಿದೆ. ಹೀಗಾಗಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಹೇಳಿದೆ ಪಂಜಾಬ್‌ ಸರ್ಕಾರ ತಿಳಿಸಿದೆ.

ರೈತರ ಸೋಗಿನಲ್ಲಿ ಅನೇಕ ಕಿಡಿಗೇಡಿಗಳು ಹರಿಯಾಣ ಮತ್ತು ಪಂಜಾಬ್‌ನ ಗಡಿಯಲ್ಲಿರುವ ಶಂಭುವಿನುದ್ದಕ್ಕೂ ಭಾರೀ ಯಂತ್ರೋಪಕರಣಗಳನ್ನು ಸಜ್ಜುಗೊಳಿಸಿದ್ದಾರೆ ಅಲ್ಲದೆ ಅಲ್ಲಲ್ಲಿ ಕಲ್ಲು ತೂರಾಟದಲ್ಲಿ ತೊಡಗಿದ್ದಾರೆ ಎಂದು ಗೃಹ ಸಚಿವಾಲಯ ಹೇಳಿದೆ.

ಗೃಹ ಸಚಿವಾಲಯ ಹೇಳಿದ್ದು...

ಪಂಜಾಬ್‌ನಲ್ಲಿ ಹದಗೆಡುತ್ತಿರುವ ಕಾನೂನು-ಸುವ್ಯವಸ್ಥೆಯು ಕಳೆದ ಕೆಲವು ದಿನಗಳಿಂದ ಕಳವಳಕಾರಿ ವಿಷಯವಾಗಿದೆ, ಏಕೆಂದರೆ ಪ್ರತಿಭಟನೆಯ ನೆಪದಲ್ಲಿ ದುಷ್ಕರ್ಮಿಗಳು ಮತ್ತು ಕಾನೂನು ಉಲ್ಲಂಘಿಸುವವರಿಗೆ ಗಡಿಯಲ್ಲಿ ಕಲ್ಲು ತೂರಾಟ, ಭಾರೀ ಯಂತ್ರೋಪಕರಣಗಳನ್ನು ಸಜ್ಜುಗೊಳಿಸಲು ಮುಕ್ತವಾಗಿ ಅವಕಾಶ ಮಾಡಿಕೊಟ್ಟಂತೆ ತೋರುತ್ತಿದೆ. ಇದು ನೆರೆಯ ರಾಜ್ಯಗಳಲ್ಲಿ  ಅಶಾಂತಿಯನ್ನು ಹರಡುವ ಗುರಿಯನ್ನು ಹೊಂದಿದಂತಿದೆ.

ಇದನ್ನು ಗಮನದಲ್ಲಿಟ್ಟುಕೊಂಡು, ಪ್ರತಿಭಟನೆಯ ನೆಪದಲ್ಲಿ ರೈತರ ಸೋಗಿನಲ್ಲಿರುವವರಿಂದ ಸಂಭವಿಸಬಹುದಾದ ಅಹಿತಕರ ಘಟನೆಗಳನ್ನು ತಡೆಯಲು ತಕ್ಷಣವೇ ಪರಿಶೀಲನೆ ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಂಜಾಬ್ ಸರ್ಕಾರಕ್ಕೆ ಗೃಹ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.