ADVERTISEMENT

ಉತ್ತರ ಪ್ರದೇಶ | ರಸ್ತೆ ಅಪಘಾತ: ಮೂರು ಮಂದಿ ಸಾವು, ಮೂವರಿಗೆ ಗಂಭೀರ ಗಾಯ

ಪಿಟಿಐ
Published 13 ಅಕ್ಟೋಬರ್ 2024, 9:21 IST
Last Updated 13 ಅಕ್ಟೋಬರ್ 2024, 9:21 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಎಟವಾ (ಉತ್ತರ ಪ್ರದೇಶ): ಇಲ್ಲಿನ ಆಗ್ರಾ–ಲಖನೌ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಕಾರೊಂದು ಗೂಡ್ಸ್‌ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರ ಮೂರು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಶನಿವಾರ ರಾತ್ರಿ ಉಸ್ರಹಾರ್ ಪ್ರದೇಶದ ಹೆದ್ದಾರಿ ಬಳಿ ಈ ಅವಘಡ ಸಂಭವಿಸಿದೆ. ಕಾರು ಲಖನೌನಿಂದ ದೆಹಲಿಗೆ ತೆರಳುತ್ತಿತ್ತು ಎಂದು ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಸಂಜಯ್‌ ಕುಮಾರ್‌ ವರ್ಮಾ ಹೇಳಿದ್ದಾರೆ.

‘ಪ್ರಯಾಣಿಕರು ದಸರಾ ರಜೆ ಮುಗಿಸಿಕೊಂಡು ಲಖನೌನಿಂದ ವಾಪಸ್ಸಾಗುತ್ತಿದ್ದರು. ಅಪಘಾತದಲ್ಲಿ ಅಫ್ಗಾನಿಸ್ತಾನ ಮೂಲದ ಮಹಿಳೆ ನಾಝ್‌, ಆಕೆಯ ಸ್ನೇಹಿತೆ ರಷ್ಯಾದ ಕ್ಯಾಥರೀನಾ ಮತ್ತು ಕಾರು ಚಾಲಕ ಸಂಜೀವ್‌ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ’ ಎಂದು ವರ್ಮಾ ತಿಳಿಸಿದ್ದಾರೆ.

ನಾಝ್‌ ಅವರ ಸಹೋದರಿ ಅತಿಫಾ, ದೆಹಲಿ ನಿವಾಸಿಗಳಾದ ಕ್ರಿಸ್ಟಿನ್ ಮತ್ತು ರಾಹುಲ್‌ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಎಟವಾದಲ್ಲಿರುವ ಸೈಫೈ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.