ನವದೆಹಲಿ: ದೀಪಾವಳಿ ಪ್ರಯುಕ್ತ ಸಿಡಿಸಿದ ಪಟಾಕಿಯಿಂದ ಸೃಷ್ಟಿಯಾದ ಭಾರಿ ಪ್ರಮಾಣದ ಹೊಗೆಯಿಂದಾಗಿ ದೆಹಲಿ, ಮುಂಬೈ ಹಾಗೂ ಕೋಲ್ಕತ್ತ ವಿಶ್ವದ 10 ಅತ್ಯಂತ ಕಲುಷಿತ ನಗರಗಳ ಪಟ್ಟಿಗೆ ಸೇರ್ಪಡೆಯಾಗಿವೆ.
ಸ್ವಿಸ್ ಗ್ರೂಪ್ ಐಕ್ಯೂಏರ್ ಸೋಮವಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 420 ರಷ್ಟಿದ್ದು, 'ಅಪಾಯಕಾರಿ' ಮಟ್ಟದಲ್ಲಿದೆ.
ಕೋಲ್ಕತ್ತದಲ್ಲಿ ಎಕ್ಯೂಐ ಪ್ರಮಾಣ 196ರಷ್ಟು ಹಾಗೂ ಮುಂಬೈನಲ್ಲಿ 163ರಷ್ಟಿದೆ. ಈ ನಗರಗಳು ಕ್ರಮವಾಗಿ 4 ಮತ್ತು 8ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ.
ದೆಹಲಿಯಲ್ಲಿ ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರ ಮೇಲೆ ಅಧಿಕಾರಿಗಳು ನಿಷೇಧ ಹೇರುತ್ತಾರೆ. ಆದರೆ, ಅಪರೂಪಕ್ಕೆಂಬಂದಂತೆ ಅದು ಜಾರಿಯಾಗುತ್ತದೆ.
ತಣ್ಣನೆಯ ಗಾಳಿಯು ವಾಹನಗಳು, ಕೈಗಾರಿಕೆಗಳು, ನಿರ್ಮಾಣ ಕಾಮಗಾರಿ ಮತ್ತು ಕೃಷಿ ತ್ಯಾಜ್ಯ ಸುಡುವುದರಿಂದ ಸೃಷ್ಟಿಯಾಗುವ ಹೊಗೆ, ಧೂಳಿನಿಂದಾಗಿ ಪ್ರತಿ ಚಳಿಗಾಲಕ್ಕೂ ಮುನ್ನ ದೇಶದಲ್ಲಿನ ಗಾಳಿಯ ಗುಣಮಟ್ಟ ಕುಸಿಯುತ್ತದೆ ಎಂದೂ ವರದಿಯಲ್ಲಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.