ADVERTISEMENT

ಮಣಿಪುರ | ಮೂವರು ಬಂಡುಕೋರರ ಬಂಧನ, ಶಸ್ತ್ರಾಸ್ತ್ರ ವಶ

ಪಿಟಿಐ
Published 18 ಜೂನ್ 2024, 5:29 IST
Last Updated 18 ಜೂನ್ 2024, 5:29 IST
<div class="paragraphs"><p>ಶಸ್ತ್ರಾಸ್ತ್ರ ವಶ</p></div>

ಶಸ್ತ್ರಾಸ್ತ್ರ ವಶ

   

(ಪಿಟಿಐ ಸಂಗ್ರಹ ಚಿತ್ರ)

ಇಂಫಾಲ: ರಾಜ್ಯದಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಬಂಡುಕೋರರನ್ನು ಬಂಧಿಸಲಾಗಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಣಿಪುರದ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಜೂನ್ 14ರಂದು ತೆಂಗ್‌ನೌಪಾಲ್‌ ಜಿಲ್ಲೆಯ ಲ್ಯಾಮ್‌ಲಾಂಗ್ ಗ್ರಾಮದ ಸಮೀಪ ಶೋಟೊಂಗ್ ಕಣಿವೆ ಮೂಲದ ಮೂವರು ಬಂಡುಕೋರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ತಿಳಿಸಿದ್ದಾರೆ.

ಗಲಭೆಪೀಡಿತ ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಾಂಗ್‌ಪೋಕ್ಪಿ ಜಿಲ್ಲೆಯ ಗಂಗಾಪಿಜಾಂಗ್ ಕಣಿವೆ ಶ್ರೇಣಿಗಳಲ್ಲಿ ನಡೆಸಿದ ಪ್ರತ್ಯೇಕ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ಒಂದು 7.62ಎಂಎಂ ಎಕೆ 56 ರೈಫಲ್, ಒಂದು ಪಿಟಿ. 22 ರೈಫಲ್, ಒಂದು 12 ಇಂಚಿನ ಸಿಂಗಲ್-ಬೋರ್ ಬ್ಯಾರೆಲ್ ಗನ್, ಎರಡು ಸುಧಾರಿತ ಪ್ರೊಜೈಕ್ಟೈಲ್ ಲಾಂಚರ್, ಒಂದು ಚೈನೀಸ್ ಹ್ಯಾಂಡ್ ಗ್ರೆನೇಡ್, ಒಂದು ದೇಶಿ ನಿರ್ಮಿತ ಹ್ಯಾಂಡ್ ಗ್ರೆನೇಡ್, ಒಂದು 51ಎಂಎಂ ಮಾರ್ಟಲ್ ಮತ್ತು ಲೈವ್ ಮದ್ದುಗಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.