ADVERTISEMENT

ಕೇರಳ | ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರಿಗೆ ಜೀವಾವಧಿ ಶಿಕ್ಷೆ

ಪಿಟಿಐ
Published 31 ಅಕ್ಟೋಬರ್ 2023, 14:44 IST
Last Updated 31 ಅಕ್ಟೋಬರ್ 2023, 14:44 IST
<div class="paragraphs"><p><strong>ಸಾಂದರ್ಭಿಕ ಚಿತ್ರ</strong></p></div>

ಸಾಂದರ್ಭಿಕ ಚಿತ್ರ

   

ಕೋಯಿಕ್ಕೋಡ್‌: ಎರಡು ವರ್ಷಗಳ ಹಿಂದೆ ಕೇರಳದ ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಬಾಲಕಿಯ ಮೇಲೆ ಸಾಮೂಹಿತ ಅತ್ಯಾಚಾರ ಎಸಗಿದ ನಾಲ್ಕು ಅಪರಾಧಿಗಳ ಪೈಕಿ ಮೂವರಿಗೆ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನೊಬ್ಬನಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಸಯೂಜಿ, ರಾಹುಲ್ ಹಾಗೂ ಆಕ್ಷಯ್‌ ಎಂಬವರಿಗೆ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾದ ಶುಹೈಬ್ ಎಂ. ಅವರು ದಲಿತ ದೌರ್ಜನ್ಯ ಕಾನೂನಿನಡಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ADVERTISEMENT

ಮತ್ತೋರ್ವ ಅಪರಾಧಿ ಶಿಬು ದಲಿತ ಸಮುದಾಯದವನಾಗಿದ್ದರಿಂದ ದಲಿತ ದೌರ್ಜನ್ಯ ಕಾನೂನಡಿ ಶಿಕ್ಷೆ ವಿಧಿಸಲಾಗಿಲ್ಲ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮನೋಜ್ ಅರೂರ್ ಮಾಹಿತಿ ನೀಡಿದ್ದಾರೆ.

ಎಲ್ಲಾ ನಾಲ್ಕು ಮಂದಿ ದೋಷಿಗಳಿಗೆ ‍‍ಪೋಕ್ಸೊ ಕಾಯ್ದೆಯಡಿ 30 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜತೆಗೆ ನಾಲ್ವರಿಗೆ ಒಟ್ಟು ₹ 5.75 ಲಕ್ಷ ದಂಡ ವಿಧಿಸಲಾಗಿದೆ.

2021ರ ಅಕ್ಟೋಬರ್ 3ರಂದು ಈ ಘಟನೆ ನಡೆದಿತ್ತು. 17 ವರ್ಷದ ಬಾಲಕಿಗೆ ನಿದ್ರೆಯ ಮಾತ್ರೆ ನೀಡಿ ಇವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು.

ಪ್ರಕರಣದಲ್ಲಿ ಒಬ್ಬ ಸಂತ್ರಸ್ತೆಯ ಸ್ನೇಹಿತ ಕೂಡ ಇದ್ದು, ಪ್ರವಾಸಿ ತಾಣ ತೋರಿಸುವ ನೆಪದಲ್ಲಿ ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ನಿದ್ದೆಯ ಮಾತ್ರೆ ಬೆರೆಸಿದ್ದ ಜ್ಯೂಸ್‌ ನೀಡಿದ್ದ. ಬಳಿಕ ನಾಲ್ವರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ನಂತರ ಆಕೆಯ ಮನೆಯ ಬಳಿ ತಂದು ಬಿಟ್ಟಿದ್ದಾರೆ.

ಒಂದು ವೇಳೆ ಘಟನೆ ಬಗ್ಗೆ ಬಾಯಿ ಬಿಟ್ಟರೆ ಭೀಕರ ಪರಿಣಾಮ ಎದುರಿಸಬೇಕು ಎಂದು ಬೆದರಿಸಿದ್ದರು. ಘಟನೆಯಿಂದ ಆಘಾತಗೊಂಡಿದ್ದ ಸಂತ್ರಸ್ತೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸ್ಥಳೀಯರು ಆಕೆಯನ್ನು ರಕ್ಷಿಸಿದ್ದರು. ಚೇತರಿಸಿಕೊಂಡ ಬಳಿಕ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಬಳಿಕ ಆಕೆಯ ಪೋಷಕರು ದೂರು ದಾಖಲಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.