ಅಮರಾವತಿ: ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ರಾಜ್ಯದ ಮೂವರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ.
ಮೃತರನ್ನು ಶ್ರೀಕಾಕುಳಂ ಜಿಲ್ಲೆಯ ಟಿ. ಲೋಕಾನಂದಂ, ಪಶ್ಚಿಮ ಗೋದಾವರಿ ಜಿಲ್ಲೆಯ ಎಂ. ಸತ್ಯನಾರಾಯಣ ಮತ್ತು ಎಂ.ಈಶ್ವರುಡು ಎಂದು ಗುರುತಿಸಲಾಗಿದೆ ಎಂದು ಆಂಧ್ರಪ್ರದೇಶ ಅನಿವಾಸಿ ತೆಲುಗು ಸೊಸೈಟಿ (APNRTS) ತಿಳಿಸಿದೆ.
ಈ ಬಗ್ಗೆ ನವದೆಹಲಿಯ ಆಂಧ್ರಪ್ರದೇಶ ಭವನ, ಎಪಿಎನ್‌ಆರ್‌ಟಿಎಸ್‌ನೊಂದಿಗೆ ಮಾಹಿತಿ ಹಂಚಿಕೊಂಡಿದೆ. ಎಪಿಎನ್‌ಆರ್‌ಟಿಎಸ್ ಮೃತರ ಕುಟುಂಬಗಳನ್ನು ಸಂಪರ್ಕಿಸಿ, ಮಾಹಿತಿಯನ್ನು ಖಚಿತಪಡಿಸಿಕೊಂಡಿದೆ. ಕುಟುಂಬದ ಪರವಾಗಿ ವಿಮಾನ ನಿಲ್ದಾಣದಿಂದ ಪಾರ್ಥಿವ ಶರೀರವನ್ನು ಸ್ವೀಕರಿಸುವ ವ್ಯಕ್ತಿಗಳ ವಿವರಗಳನ್ನೂ ಸಂಗ್ರಹಿಸಿದೆ ಎಂದು ಸೊಸೈಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪಾರ್ಥಿವ ಶರೀರವನ್ನು ಪಡೆಯಲು ಎಪಿಎನ್‌ಆರ್‌ಟಿಎಸ್, ಎಪಿ ಭವನದೊಂದಿಗೆ ಮಾತುಕತೆ ನಡೆಸುತ್ತಿದೆ. ಮಾಹಿತಿಯ ಪ್ರಕಾರ, ಪಾರ್ಥೀವ ಶರೀರ ಶುಕ್ರವಾರ ಮಧ್ಯಾಹ್ನದ ವೇಳೆಗೆ ನವದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.