ನವದೆಹಲಿ: ಜಿ 20 ಶೃಂಗಸಭೆಯಲ್ಲಿ ಚೀನಾದ ಪ್ರತಿನಿಧಿಗಳು ಭಾಗವಹಿಸುವುದನ್ನು ವಿರೋಧಿಸಿ ಟಿಬೆಟನ್ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳು ಶುಕ್ರವಾರ, ದಕ್ಷಿಣ ದೆಹಲಿಯ ಮಜ್ನು ಕಾ ಟಿಲ್ಲಾ ಸಮೀಪ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ಚೀನಾ ವಿರೋಧಿ ಘೋಷಣೆಗಳಿದ್ದ ಭಿತ್ತಿಪತ್ರ ಹಿಡಿದಿದ್ದು, ಪ್ರತಿಭಟನೆ ಶಾಂತಿಯುತವಾಗಿತ್ತು. ಮುಂಜಾಗ್ರತೆಯಾಗಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ಪ್ರತಿಭಟನಕಾರರು ತಮ್ಮ ಮುಖ, ದೇಹದ ಮೇಲೂ ‘ಫ್ರಿ ಟಿಬೆಟ್’ ಘೋಷಣೆ ಬರೆಯಿಸಿಕೊಂಡಿದ್ದರು. ಈ ಪ್ರತಿಭಟನೆಯು ಭಾರತ ಅಥವಾ ಭಾರತವು ಜಿ 20 ಶೃಂಗಸಭೆ ಆಯೋಜಿಸುತ್ತಿರುವುದರ ವಿರುದ್ಧವಲ್ಲ. ಈ ಶೃಂಗಸಭೆಯಲ್ಲಿ ಚೀನಾ ಭಾಗವಹಿಸುವಿಕೆಗೆ ವಿರೋಧ ವ್ಯಕ್ತಪಡಿಸುವುದೇ ನಮ್ಮ ಉದ್ದೇಶ ಎಂದು ಟಿಬೆಟನ್ ಯುವ ಕಾಂಗ್ರೆಸ್‌ನ ಅಧ್ಯಕ್ಷ ಗೊನ್ಪೊ ಧುಂಡುಪ್ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.