ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ‘ತಡೊಬಾ ಅಂಧಾರಿ ಹುಲಿ ಸಂರಕ್ಷಿತಾರಣ್ಯ’ದಲ್ಲಿ ಎರಡು ಹುಲಿ ಕಳೇಬರಗಳು ಪತ್ತೆಯಾಗಿದ್ದು, ಅವು ಕಾದಾಟದಲ್ಲಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.
‘ಸೋಮವಾರ ಖೋಲ್ಸಾ ಅರಣ್ಯ ವಲಯದ ಕಾಂತೊಳೆ ಕೆರೆಯ ಸನಿಹ ಒಂದು ಹೆಣ್ಣು, ಒಂದು ಗಂಡು ಹುಲಿಯ ಮೃತದೇಹಗಳು ಪತ್ತೆಯಾಗಿದ್ದವು. ಇವು ತಮ್ಮ ಜಾಗದ ಮೇಲೆ ಹಿಡಿತ ಸಾಧಿಸಲು ಕಾದಾಡಿ ಮೃತಪಟ್ಟಿರಬಹುದು. ಹೆಣ್ಣು ಹುಲಿಯ ದೇಹದ ಭಾಗಶಃ ಭಾಗ ಭಕ್ಷಣೆ ಆಗಿದೆ’ ಎಂದು ತಡೊಬಾ ಅಂಧಾರಿ ಹುಲಿ ಸಂರಕ್ಷಿತಾರಣ್ಯದ ಅಧಿಕಾರಿಗಳು ತಿಳಿಸಿದ್ದಾರೆ.
‘ಏನಾಗಿರಬಹುದು? ಎಂಬುದನ್ನು ಕ್ಯಾಮೆರಾ ಟ್ರ್ಯಾಪ್ ಮೂಲಕ ಗುರುತಿಸಲಾಗುತ್ತಿದೆ. ಅಲ್ಲದೇ ಇಂದು ಎರಡೂ ಹುಲಿಗಳ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು’ ಎಂದು ತಿಳಿಸಿದ್ದಾರೆ.
ಗಂಡು ಹುಲಿ T–92 ಏಳರಿಂದ ಎಂಟು ವರ್ಷದ್ದಾಗಿದ್ದರೆ, ಹೆಣ್ಣು ಹುಲಿ T–142, ಐದರಿಂದ ಆರು ವಯಸ್ಸಿನದಾಗಿತ್ತು ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.