ರಾಂಚಿ: ನಗರದ ಬಿರ್ಸಾ ಜೈವಿಕ ಉದ್ಯಾನದಲ್ಲಿ ಹುಲಿಗಳಿರುವ ಪ್ರದೇಶದೊಳಗೆ ಜಿಗಿದ ಯುವಕರೊಬ್ಬರನ್ನು ಹೆಣ್ಣುಹುಲಿಯೊಂದು ಕೊಂದ ಘಟನೆ ಬುಧವಾರ ನಡೆದಿದೆ.
‘ಅಂದಾಜು 20 ವರ್ಷದ ಯುವಕ ಬೆಳಿಗ್ಗೆ 11.30ರ ಹೊತ್ತಿಗೆ ಹುಲಿಗಳು ವಾಸಿಸುವ ತಾಣದಲ್ಲಿ ಜಿಗಿದಿದ್ದಾರೆ. ತಕ್ಷಣ ಅವರ ಮೇಲೆರಗಿದ ಹುಲಿ, ಕತ್ತನ್ನು ಸೀಳಿದ ಕಾರಣ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಉದ್ಯಾನದ ಅಧಿಕಾರಿ ತಿಳಿಸಿದ್ದಾರೆ.
‘ಮೃತ ಯುವಕ ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂಬುದಾಗಿ ಅವರ ಸ್ನೇಹಿತರೊಬ್ಬರು ತಿಳಿಸಿದ್ದಾರೆ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.