ADVERTISEMENT

ತಿರಿಯಾ ಎನ್‌ಕೌಂಟರ್: 12 ಆರೋಪಿಗಳ ವಿರುದ್ಧ ಎನ್‌ಐಎ ಆರೋಪ ಪಟ್ಟಿ

ಐಎಎನ್ಎಸ್
Published 14 ಅಕ್ಟೋಬರ್ 2023, 10:03 IST
Last Updated 14 ಅಕ್ಟೋಬರ್ 2023, 10:03 IST
   

ನವದೆಹಲಿ: 2019ರಲ್ಲಿ ಛತ್ತೀಸಗಢದ ತಿರಿಯಾ ಎಂಬ ಹಳ್ಳಿಯ ಬಳಿ ಭದ್ರತಾ ಪಡೆಗಳ ಮೇಲೆ ಸಿಪಿಐ (ಮಾವೋವಾದಿ) ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆರೋಪಪಟ್ಟಿ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಆರು ಮಾವೋವಾದಿಗಳು ಹಾಗೂ ಒಬ್ಬ ನಾಗರಿಕ ಮೃತಪಟ್ಟಿದ್ದರು.

ಶಸ್ತ್ರಾಸ್ತ್ರ ಕಾಯ್ದೆ, ಕಾನೂನುಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ (ಯುಎಪಿಎ) ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.

ADVERTISEMENT

‌ಶಸ್ತ್ರಸಜ್ಜಿತ ದುಷ್ಕರ್ಮಿಗಳ ತಂಡ, ಜಗದಾಲ್‌ಪುರದ ಜಿತಿಯಾ ಗ್ರಾಮದ ಸಮೀಪ ಶೋಧ ಕಾರ್ಯಾಚರಣೆಯಲ್ಲಿ ನಿರತವಾಗಿದ್ದ ಜಿಲ್ಲಾ ಮೀಸಲು ಪಡೆ (ದಿಆರ್‌ಜಿ), ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌), ರಾಜ್ಯ ಪೊಲೀಸ್‌ ಮತ್ತು ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಅನ್ನು ಗುರಿಯಾಗಿಸಿ ದಾಳಿ ಮಾಡಿತ್ತು.

ಈ ಸಂಬಂಧ 2019ರ ಜೂನ್‌ 28ರಂದು ಪ್ರಕರಣ ದಾಖಲಾಗಿತ್ತು. ಬಳಿಕ 2021ರ ಮಾರ್ಚ್‌ 18ರಂದು ಎನ್‌ಐಎ ತನಿಖೆಯ ಹೊಣೆ ವಹಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.