ADVERTISEMENT

2022ರಲ್ಲಿ ತಿರುಪತಿ ಹುಂಡಿ ಸಂಗ್ರಹ ₹1,450 ಕೋಟಿ

ಪಿಟಿಐ
Published 13 ಜನವರಿ 2023, 14:17 IST
Last Updated 13 ಜನವರಿ 2023, 14:17 IST
   

ತಿರುಪತಿ : ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವೆಂದೇ ಪ್ರಸಿದ್ಧ ವೆಂಕಟೇಶ್ವರ ಸ್ವಾಮಿ ಸನ್ನಿಧಾನಕ್ಕೆ ಭಕ್ತರು 2022ರಲ್ಲಿ ಸಲ್ಲಿಸಿರುವ ಹುಂಡಿ ಕಾಣಿಕೆ ₹1,450 ಕೋಟಿ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ ಹೇಳಿದ್ದಾರೆ.

ಕಳೆದ ವರ್ಷ 2.37 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. 2021ರಲ್ಲಿ ದೇಗುಲದ ಹುಂಡಿ ಸಂಗ್ರಹ ₹833.41 ಕೋಟಿ ಮತ್ತು ಭೇಟಿ ನೀಡಿದ್ದ ಭಕ್ತರ ಸಂಖ್ಯೆ 1.04 ಕೋಟಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ.

2021 ರ ಹೆಚ್ಚಿನ ಭಾಗ ಮತ್ತು 2022 ರ ಆರಂಭದಲ್ಲಿ ಕೋವಿಡ್‌ ನಿರ್ಬಂಧಗಳಿದ್ದವು. ಹೀಗಾಗಿ ಇವೆರಡು ವರ್ಷಗಳನ್ನು ಹೋಲಿಸಲು ಸಾಧ್ಯವಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಟಿಟಿಡಿ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಡಿಸೆಂಬರ್ ತಿಂಗಳೊಂದರಲ್ಲೇ ಹುಂಡಿ ಸಂಗ್ರಹ ₹129.37 ಕೋಟಿ. ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 20.25 ಲಕ್ಷ. 2023ರ ಜನವರಿ 11ರವರೆಗೆ 6 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಶ್ರೀವಾರಿ ಹುಂಡಿಯಲ್ಲಿ ₹39.40 ಕೋಟಿ ಕಾಣಿಕೆ ಸಲ್ಲಿಸಿದ್ದಾರೆ. ಟಿಟಿಡಿ 2022 ರಲ್ಲಿ 11.54 ಲಕ್ಷ ಲಡ್ಡು ಪ್ರಸಾದವನ್ನು ಮಾರಾಟ ಮಾಡಿದೆ. 2021ರಲ್ಲಿ ಹಿಂದಿನ ವರ್ಷದಲ್ಲಿ 5.96 ಲಕ್ಷ ಲಡ್ಡು ಮಾರಿತ್ತು ಎಂದು ಟಿಟಿಡಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.