ADVERTISEMENT

ತಿರುಮಲ: ಇಂದಿನಿಂದ ಬ್ರಹ್ಮೋತ್ಸವ

ಪಿಟಿಐ
Published 3 ಅಕ್ಟೋಬರ್ 2024, 23:30 IST
Last Updated 3 ಅಕ್ಟೋಬರ್ 2024, 23:30 IST
ತಿರುಮಲ ತಿರುಪತಿ ದೇಗುಲ
ತಿರುಮಲ ತಿರುಪತಿ ದೇಗುಲ   

ತಿರುಪತಿ: ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ 9 ದಿನಗಳ ಬ್ರಹ್ಮೋತ್ಸವವು ಶುಕ್ರವಾರದಿಂದ ಆರಂಭವಾಗಲಿದೆ. 

ಬ್ರಹ್ಮೋತ್ಸವವ ಅ.4ರಿಂದ 12ರವರೆಗೆ ನಡೆಯಲಿದ್ದು, ಈ ವೇಳೆ ದೇವಸ್ಥಾನಕ್ಕೆ ಪ್ರತಿ ದಿನ 2 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಶಿಷ್ಟಾಚಾರಕ್ಕೆ ಅನು‌ಗುಣವಾಗಿ ಕೆಲವು ಸೇವೆಗಳು, ಅಂಗ ಪ್ರದಕ್ಷಿಣೆ ಹಾಗೂ ವಿಐಪಿ ದರ್ಶನ ವ್ಯವಸ್ಥೆಯನ್ನು ರದ್ದು ಮಾಡಲಾಗುವುದು ಎಂದು ‘ತಿರುಮಲ ತಿರುಪತಿ ದೇವಸ್ಥಾನಂ’ (ಟಿಟಿಡಿ) ಹೇಳಿದೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲ ರಾವ್‌, ‘ಭಕ್ತರಿಗಾಗಿ 7 ಲಕ್ಷ ಲಾಡುಗಳನ್ನು ಈಗಾಗಲೇ ತಯಾರಿಸಲಾಗಿದೆ’ ಎಂದರು.   

ADVERTISEMENT

ಅಲ್ಲದೇ ‘ಭಕ್ತರ ನೆರವಿಗಾಗಿ ಸಹಾಯ ಕೇಂದ್ರಗಳನ್ನು ಸ್ಥಾಪಿಸ ಲಾಗುವುದು. 11.5 ಲಕ್ಷ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸುಮಾರು 45,000 ಭಕ್ತರಿಗೆ ತಿರುಮಲದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.