ADVERTISEMENT

ಆಪ್‌ ಸರ್ಕಾರದ ಕಾರ್ಯಕ್ರಮದಲ್ಲಿ ಗಾಯಕ ಕೃಷ್ಣ ಸಂಗೀತ ಕಛೇರಿ

ಕಾರ್ಯಕ್ರಮ ರದ್ದುಪಡಿಸಿದ್ದ ಎಎಐ

ಪಿಟಿಐ
Published 16 ನವೆಂಬರ್ 2018, 17:40 IST
Last Updated 16 ನವೆಂಬರ್ 2018, 17:40 IST
ಟಿ.ಎಂ.ಕೃಷ್ಣ
ಟಿ.ಎಂ.ಕೃಷ್ಣ   

ನವದೆಹಲಿ: ದೆಹಲಿ ಸರ್ಕಾರದ ಆಹ್ವಾನದ ಮೇರೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರು ಶನಿವಾರ ಸಂಜೆ ಕಾರ್ಯಕ್ರಮ ನೀಡಲಿದ್ದಾರೆ.

ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರವು (ಎಎಐ) ಮೊದಲು ಕೃಷ್ಣ ಅವರ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಕೃಷ್ಣ ವಿರುದ್ಧ ‘ನಗರ ನಕ್ಸಲ್‌’, ‘ಮತಾಂತರಗೊಂಡವ’ ಎಂಬ ಟೀಕೆಗಳು ಹರಿದಾಡಿದ್ದವು. ನಂತರ, ಎಎಐ ಕೃಷ್ಣ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು.

ಕೃಷ್ಣ ಅವರು ನ.17ರಂದು ದೆಹಲಿಯ ಗಾರ್ಡನ್‌ ಆಫ್‌ ಫೈವ್‌ ಸೆನ್ಸಸ್‌ನಲ್ಲಿ ನಡೆಯಲಿರುವ ಎಎಪಿ ಸರ್ಕಾರದ ಕಾರ್ಯಕ್ರಮದಲ್ಲಿ ಸಂಗೀತ ಕಚೇರಿ ನಡೆಸಿಕೊಡಲಿದ್ದಾರೆ’ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ.

ADVERTISEMENT

ಆದರೆ, ‘ಕೃಷ್ಣ ಅವರ ಕಾರ್ಯಕ್ರಮವನ್ನು ರದ್ದು ಮಾಡಿಲ್ಲ. ಆಂತರಿಕ ಬದಲಾವಣೆಯ ಕಾರಣದಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ’ ಎಂದು ಎಎಐಯ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.