ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಿಸುಮುರಿಸು ಉಂಟು ಮಾಡುವ ಉದ್ದೇಶದಿಂದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಉದ್ಯಮಿ ಗೌತಮ್ ಅದಾನಿ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು’ ಎಂದು ಉದ್ಯಮಿ ದರ್ಶನ್ ಹಿರನಂದಾನಿ ಆರೋಪಿಸಿದ್ದಾರೆ.
ಈ ಕುರಿತು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಅವರು, ಲೋಕಸಭೆ ಸದಸ್ಯೆ ಮೊಹುವಾ ಮೊಯಿತ್ರಾ ಅವರು ತಮಗೆ ತಮ್ಮ ಸಂಸತ್ ಸದಸ್ಯತ್ವ ಇ–ಮೇಲ್ ಐ.ಡಿ ಅನ್ನು ನೀಡಿದ್ದರು. ಆ ಮೂಲಕ ನಾನು ಅವರಿಗೆ ಮಾಹಿತಿ ಕಳುಹಿಸುತ್ತಿದ್ದೆ. ಅದನ್ನು ಆಧರಿಸಿ ಸಂಸದೆಯು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು’ ಎಂದು ತಿಳಿಸಿದ್ದಾರೆ.
ಸಂಸತ್ತಿನಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ದೊರೆತ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿದ್ದ ಅವರು, ಅದಾನಿ ಗ್ರೂಪ್ ವಿರುದ್ಧ ದಾಳಿ ನಡೆಸಲು ತಮಗೆ ಸಹಕಾರ ನೀಡಬೇಕು ಎಂದು ಕೋರಿದ್ದರು. ಅಲ್ಲದೆ, ತಮಗೆ ತಮ್ಮ ಅಧಿಕೃತ ಇ–ಮೇಲ್ ಐ.ಡಿ ಲಾಗಿನ್, ಪಾಸ್‌ವರ್ಡ್ ವಿವರ ನೀಡಿದ್ದರು. ಇದನ್ನು ಆಧರಿಸಿ ನಾನು ಅವರ ಪರವಾಗಿ ನೇರವಾಗಿ ಪ್ರಶ್ನೆಗಳನ್ನು ಪೋಸ್ಟ್ ಮಾಡುತ್ತಿದ್ದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.