ADVERTISEMENT

ಪಶ್ಚಿಮ ಬಂಗಾಳ: ಬಿಜೆಪಿಗೆ ಸೇರಿದ ಟಿಎಂಸಿ ಸಂಸದ ಸಿಸಿರ್ ಅಧಿಕಾರಿ

ಪಿಟಿಐ
Published 21 ಮಾರ್ಚ್ 2021, 9:18 IST
Last Updated 21 ಮಾರ್ಚ್ 2021, 9:18 IST
ಸಿಸಿರ್‌ ಅಧಿಕಾರಿ
ಸಿಸಿರ್‌ ಅಧಿಕಾರಿ   

ಕಾಂತಿ(ಪಶ್ಚಿಮ ಬಂಗಾಳ): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಮ್ಮುಖದಲ್ಲಿ ಟಿಎಂಸಿ ಸಂಸದ ಸಿಸಿರ್ ಅಧಿಕಾರಿ ಅವರು ಭಾನುವಾರ ‘ಕಮಲ’ ಪಕ್ಷಕ್ಕೆ ಸೇರ್ಪಡೆಯಾದರು.

‘ಮಿಡ್ನಾಪುರದ ಗೌರವವನ್ನು ಉಳಿಸಲು ಮಮತಾ ಬ್ಯಾನರ್ಜಿ ಅವರ ಪಕ್ಷದ ವಿರುದ್ಧ ಹೋರಾಡುತ್ತೇನೆ’ ಎಂದು ಅವರು ಈ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.

‘ಆಡಳಿತ ಪಕ್ಷವು ಬೇರೆ ಯಾವುದೇ ದಾರಿಯನ್ನು ಉಳಿಸಿಲ್ಲ. ಹಾಗಾಗಿ ನಾನು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ’ ಎಂದು ಸಿಸಿರ್‌ ಅವರು ಹೇಳಿದರು.

ADVERTISEMENT

‘ಆಡಳಿತ ಪಕ್ಷವು ನನಗೆ ಮತ್ತು ನನ್ನ ಮಗ ಸುವೇಂದುಗೆ ಅವಮಾನ ಮಾಡಿದೆ. ಟಿಎಂಸಿ ನಾಯಕರೇ ಬಿಜೆಪಿಗೆ ಸೇರಲು ನನ್ನ ಮೇಲೆ ಒತ್ತಡ ಹಾಕಿದ್ದಾರೆ. ಅವರಿಗೆ ಏನು ಬೇಕೋ ಅದನ್ನು ಅವರು ಮಾಡಲಿ. ನನಗೆ ಸಾಧ್ಯವಾದದ್ದನ್ನು ನಾನು ಮಾಡುತ್ತೇನೆ’ ಎಂದು ಅವರು ತಿಳಿಸಿದರು.

‘ನಂದಿಗ್ರಾಮದಲ್ಲಿ ಸುವೇಂದು ಹಲವು ಮತಗಳ ಅಂತರದಲ್ಲಿ ಟಿಎಂಸಿಯ ವಿರುದ್ಧ ಗೆಲವು ಸಾಧಿಸಲಿ. ಪೂರ್ವ ಮಿಡ್ನಾಪುರದಿಂದ ಟಿಎಂಸಿ ಅಸ್ತಿತ್ವವನ್ನು ಅಳಿಸಿ ಹಾಕಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಸಿಸಿರ್‌ ಅಧಿಕಾರಿ ಅವರ ಮಗ ಸುವೇಂದು ಅಧಿಕಾರಿ ಬಿಜೆಪಿ ಅಭ್ಯರ್ಥಿಯಾಗಿ ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.