ಚೆನ್ನೈ: ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಬಗ್ಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಂಗಳವಾರ ಸುಳಿವು ನೀಡಿದ್ದಾರೆ.
ಇದರೊಂದಿಗೆ ಸಚಿವ ಸಂಪುಟ ಬದಲಾವಣೆಯ ಬಗ್ಗೆಯೂ ಎಂ.ಕೆ ಸ್ಟಾಲಿನ್ ಪರೋಕ್ಷವಾಗಿ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಟಾಲಿನ್ ಅವರು, ‘ಯಾರಿಗೂ ನಿರಾಸೆಯಾಗಲ್ಲ, ಬದಲಾವಣೆಯಾಗುತ್ತದೆ’ ಎಂದು ಹೇಳಿದ್ದಾರೆ.
ಸಚಿವ ಸಂಪುಟ ಬದಲಾವಣೆ ಮತ್ತು ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ನಿರೀಕ್ಷೆಯಂತೆ ತಮ್ಮ ಪುತ್ರ ಉದಯನಿಧಿಗೆ ಪ್ರಮುಖ ಹುದ್ದೆ ನೀಡುವ ಬಗ್ಗೆ ಸ್ಟಾಲಿನ್ ಈ ಹಿಂದೆಯು ಎರಡು ಬಾರಿ ಸುಳಿವು ನೀಡಿದ್ದರು.
‘ಉದಯನಿಧಿ ಅವರನ್ನು ಶೀಘ್ರವೇ ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ’ ಎಂದು ತಮಿಳುನಾಡಿನ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕಾ ಸಚಿವ ಥಾ ಮೋ ಅಂಬರಸನ್ ಅವರು ಗುರುವಾರ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.