ADVERTISEMENT

ಗಿರಿವಳಂ ಮಾರ್ಗದಲ್ಲಿ ಮಾಂಸಾಹಾರಿ ಹೋಟೆಲ್: ತಮಿಳುನಾಡು ರಾಜ್ಯಪಾಲ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 16:16 IST
Last Updated 12 ಆಗಸ್ಟ್ 2023, 16:16 IST
ಆರ್.ಎನ್. ರವಿ
ಆರ್.ಎನ್. ರವಿ   

 ಚೆನ್ನೈ: ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರ ದೇವಸ್ಥಾನಕ್ಕೆ ಹೋಗುವ ಗಿರಿವಳಂ ಮಾರ್ಗದಲ್ಲಿ ಮಾಂಸಾಹಾರಿ ಹೋಟೆಲ್‌ಗಳಿರುವುದಕ್ಕೆ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಿರುವಣ್ಣಾಮಲೈಗೆ ಎರಡು ದಿನಗಳ ಹಿಂದೆ ಭೇಟಿ ಕೊಟ್ಟಿದ್ದ ಅವರು,  ಅಲ್ಲಿಂದ ವಾಪಸ್ ಬಂದ ಬಳಿಕ ಮಾಂಸಾಹಾರಿ ಹೋಟೆಲ್‌ಗಳ ಕುರಿತು ಆಕ್ಷೇಪಿಸಿ ಹೇಳಿಕೆ ನೀಡಿದ್ದಾರೆ. 

‘ಅರುಣಾಚಲೇಶ್ವರ ದೇವಸ್ಥಾನಕ್ಕೆ ತೆರಳುವ ಪವಿತ್ರ ಗಿರಿವಳಂ ಮಾರ್ಗದಲ್ಲಿ ಶೌಚಾಲಯಗಳಿಲ್ಲ.  ಇಲ್ಲಿ ಮಾಂಸ ಮಾರಾಟದ ಅಂಗಡಿಗಳು ಹಾಗೂ ಮಾಂಸಾಹಾರದ ಹೋಟೆಲ್‌ಗಳಿರುವುದು ಕಂಡು ಬೇಸರವಾಯಿತು’ ಎಂದು ರಾಜಭನದಿಂದ ಬಿಡುಗಡೆಯಾಗಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

‘ಈ ಕುರಿತು ಭಕ್ತರು ನೋವನ್ನು ಹಂಚಿಕೊಂಡಿದ್ದಾರೆ. ಆಹಾರ ಸೇವನೆಯು ಸಂಪೂರ್ಣವಾಗಿ ವೈಯಕ್ತಿಕವಾದ ಆಯ್ಕೆ ಎಂಬುದನ್ನು ನಾನು ನಂಬುತ್ತೇನೆ. ಆದರೆ, ಅರುಣಾಚಲೇಶ್ವರಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರ ಭಾವನೆಗಳನ್ನೂ ನಾವು ಗೌರವಿಸಬೇಕು’ ಎಂದೂ ರವಿ ಅವರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.