ADVERTISEMENT

ಪೆಟ್ರೋಲ್‌ ಬಾಂಬ್‌ ಪ್ರಕರಣ: ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ ಬಿಡುಗಡೆ

ಪಿಟಿಐ
Published 27 ಅಕ್ಟೋಬರ್ 2023, 12:49 IST
Last Updated 27 ಅಕ್ಟೋಬರ್ 2023, 12:49 IST
<div class="paragraphs"><p> ಬಾಂಬ್‌ (ಪ್ರಾತಿನಿಧಿಕ ಚಿತ್ರ)</p></div>

ಬಾಂಬ್‌ (ಪ್ರಾತಿನಿಧಿಕ ಚಿತ್ರ)

   

ಚೆನ್ನೈ: ತಮಿಳುನಾಡಿನ ರಾಜಭವನದ ಮುಖ್ಯ ದ್ವಾರದ ಮುಂಭಾಗ ಪೆಟ್ರೋಲ್‌ ಬಾಂಬ್‌ ಎಸೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಯನ್ನು ಪೊಲೀಸ್‌ ಮಹಾನಿರ್ದೇಶಕ ಶಂಕರ್‌ ಜೀವಲ್‌ ಮತ್ತು ಗ್ರೇಟರ್‌ ಚೆನ್ನೈ ಪೊಲೀಸ್‌ ಆಯುಕ್ತ ಸಂದೀಪ್‌ ರಾಯ್‌ ರಾಥೋಡ್‌ ‌ಅವರು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.

ಆರೋಪಿ ಕುರುಕ್ಕಾ ವಿನೋದ್‌ ಒಬ್ಬನೇ ಚೆನ್ನೈನ ತಾಲ್ಲೂಕು ಕಚೇರಿ ರಸ್ತೆಯ ಮೂಲಕ ರಾಜಭವನವಿರುವ ಸರ್ದಾರ್‌ ಪಟೇಲ್‌ ರಸ್ತೆಯ ಕಡೆಗೆ ನಡೆದು ಹೋಗುತ್ತಿರುವುದು ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಯಲ್ಲಿ ದಾಖಲಾಗಿದೆ.

ADVERTISEMENT

ರಾಜಭವನದ ದ್ವಾರದ ಬಳಿಗೆ ತಲುಪಿದಾಗ ಆರೋಪಿಯು ಪೆಟ್ರೋಲ್‌ ಬಾಂಬ್‌ ಎಸೆಯಲು ಯತ್ನಿಸುತ್ತಿರುವುದು ಮತ್ತು ಪೊಲೀಸರು ಆತನನ್ನು ತಡೆಯುತ್ತಿರುವುದು ಕೂಡ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.