ಚೆನ್ನೈ: ತಮಿಳುನಾಡಿನ ರಾಜಧಾನಿಯಲ್ಲಿ ಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಚೆನ್ನೈ ಕೊಲೆಗಳ ನಗರವಾಗುತ್ತಿದೆ. ಇದರಿಂದ ಜನರ ಭದ್ರತೆಯ ಬಗ್ಗೆ ಅನಿಶ್ಚಿತತೆ ಮೂಡುತ್ತಿದೆ ಎಂದು ಆಡಳಿತ ಪಕ್ಷ ಡಿಎಂಕೆಯ ವಿರುದ್ಧಎಐಎಡಿಎಂಕೆ ನಾಯಕ ಕೆ. ಪಳನಿಸ್ವಾಮಿ ಆರೋಪಿಸಿದ್ದಾರೆ.
ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿ ಈ ಕುರಿತು ಟ್ವೀಟ್ ಮಾಡಿರುವ ಪಳನಿಸ್ವಾಮಿ, ‘ಕಳೆದ 20 ದಿನಗಳಲ್ಲಿ ನಡೆದ 18 ಹತ್ಯೆಗಳಿಗೆ ಚೆನ್ನೈ ನಗರ ಸಾಕ್ಷಿಯಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ಜನರ ಭದ್ರತೆಯ ಬಗ್ಗೆ ಪ್ರಶ್ನೆ ಮೂಡುತ್ತಿದೆ’ ಎಂದು ತಿಳಿಸಿದ್ದಾರೆ.
ಪೊಲೀಸ್ ಖಾತೆಯ ಸುಪರ್ದಿಯನ್ನು ಹೊಂದಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಪಳನಿಸ್ವಾಮಿ, ‘ಸಿಎಂ ಸ್ಟಾಲಿನ್ ಅವರ ಅಧೀನದಲ್ಲಿ ಪೊಲೀಸ್ ಖಾತೆಯಿದ್ದರೂ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಭಿವೃದ್ಧಿಯಾಗುತ್ತಿಲ್ಲ. ಬದಲಿಗೆ ತಮಿಳುನಾಡಿನ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವ ಮಾಧ್ಯಮಗಳ ಪ್ರಯತ್ನಗಳನ್ನು ಹತ್ತಿಕ್ಕಲಾಗುತ್ತಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.